HEALTH TIPS

ದಳಪತಿ ವಿಜಯ್ 'ಜನ ನಾಯಗನ್‌' ಸಿನಿಮಾ ಲೀಕ್: 6 ಆರೋಪಿಗಳ ಬಂಧನ

 'ಜನ ನಾಯಗನ್' ಸಿನಿಮಾದ ದೃಶ್ಯಗಳನ್ನು ಸೋರಿಕೆ ಮಾಡಿದ ಪ್ರಕರಣದಲ್ಲಿ ತಮಿಳುನಾಡು ಸೈಬರ್ ಕ್ರೈಂ ವಿಭಾಗವು ಆರು ಮಂದಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಅಳಿಸಿ ಹಾಕಲಾಗಿದೆ.



ಜನವರಿ 9ರಂದು ದಳಪತಿ ವಿಜಯ್‌ ನಟನೆಯ ಕೊನೆಯ ಜನ ನಾಯಗನ್ ಸಿನಿಮಾವು ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆಗೂ ಮುನ್ನ ಸಿನಿಮಾಗೆ ಹಲವು ಸಂಕಷ್ಟಗಳು ಎದುರಾಗುತ್ತಲೇ ಇವೆ. ಇತ್ತೀಚಿಗಷ್ಟೇ ಸಿನಿಮಾದ ದೃಶ್ಯಗಳುಳ್ಳ 5 ನಿಮಿಷದ ವಿಡಿಯೊ ಕ್ಲಿಪ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಲಾಗಿತ್ತು. ಈ ಸಂಬಂಧ ಸೈಬರ್ ಅಪರಾಧ ತನಿಖಾ ಕೇಂದ್ರವು ಏಪ್ರಿಲ್ 12ರಂದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದೆ. 'ಈ ಪ್ರಕರಣವು ತನಿಖೆ ಹಂತದಲ್ಲಿದ್ದು, ಈ ಹಂತದಲ್ಲಿ ಬಂಧಿತರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ಜೊತೆಗೆ ಪೈರಸಿ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಗಂಭೀರ ಅಪರಾಧವಾಗಿದೆ. ಹಾಗೇನಾದರೂ ಪೈರಸಿ ಮಾಡಿದರೆ ಶಿಕ್ಷಾರ್ಹ ಕ್ರಮಗಳು ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಸೈಬರ್ ಅಪರಾಧ ವಿಭಾಗದ ಮುಖ್ಯ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಡಿಜಿಟಲ್ ಪೈರಸಿ ವಿಶ್ಲೇಷಣೆ ನಡೆಸಿ ವಿಡಿಯೊ ಹಂಚುವಿಕೆಯನ್ನು ಪತ್ತೆಹಚ್ಚಲು ಹಲವು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತನಿಖೆಯಲ್ಲಿ, ಕ್ಲೌಡ್ ಸ್ಟೋರೇಜ್ ವೇದಿಕೆಗಳ ಮೂಲಕ ಅಪ್‌ಲೋಡ್ ಮಾಡಿ, ಲಿಂಕ್‌ಗಳನ್ನು ಹಂಚಿಕೆ ಮಾಡುತ್ತಿದ್ದರೆಂದು ಶಂಕಿಸಲಾದ ಆರು ಮಂದಿಯನ್ನು ಗುರುತಿಸಲಾಗಿದೆ. ಆರೋಪಿಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 300ಕ್ಕೂ ಹೆಚ್ಚು ಲಿಂಕ್‌ಗಳನ್ನು ನಿರ್ಬಂಧಿಸಲು ವಿಭಾಗ ಕ್ರಮ ಕೈಗೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳು ಮತ್ತು ಫೈಲ್‌ ಹಂಚಿಕೆ ಸೇವೆಗಳ ಮೇಲೆ ವಿಶೇಷ ತಂಡಗಳು ನಿಗಾ ವಹಿಸಿ, ಪೈರಸಿ ಹರಡುವಿಕೆಯನ್ನು ತಡೆಗಟ್ಟಲು ಕಾರ್ಯನಿರ್ವಹಿಸುತ್ತಿವೆ' ಎಂದು ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries