HEALTH TIPS

ಪ್ರಯಾಣಿಕರ ಗಮನಕ್ಕೆ, ರೈಲಲ್ಲಿದ್ದರೂ ನೀವಿನ್ನು ಸ್ವಿಗ್ಗಿ ಆರ್ಡರ್‌ ಮಾಡ್ಕೊಳ್ಳಿ!

 ಬೆಂಗಳೂರು: ದೂರದ ಊರಿಗೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಊಟ-ತಿಂಡಿಯದ್ದೇ ದೊಡ್ಡ ಚಿಂತೆ. ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು, ಭಾರತದ ಪ್ರಮುಖ ಎಐ-ಆಧಾರಿತ ರೈಲು ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಾದ 'ಇಕ್ಸಿಗೋ', 'ಖಚಿತ ಟಿಕೆಟ್' ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ 'ಸ್ವಿಗ್ಗಿ' ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ.


ಈ ಮೂಲಕ 'ಫುಡ್ ಆನ್ ಟ್ರೈನ್' ಸೇವೆಯನ್ನು ಉನ್ನತೀಕರಿಸಲಾಗಿದ್ದು, ಇನ್ಮುಂದೆ ಪ್ರಯಾಣಿಕರು ದೇಶದ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 40 ಸಾವಿರಕ್ಕೂ ಅಧಿಕ ಪ್ರತಿಷ್ಠಿತ ರೆಸ್ಟೋರೆಂಟ್‌ಗಳಿಂದ ತಮಗೆ ಇಷ್ಟವಾದ, ತಾಜಾ ಹಾಗೂ ಶುಚಿಯಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದಾಗಿದೆ.

ಬುಕಿಂಗ್ ಹೇಗೆ? ಡೆಲಿವರಿಗೆ ಗ್ಯಾರಂಟಿ ಏನು?

ಗ್ರಾಹಕರು ತಮ್ಮ ಇಕ್ಸಿಗೋ ಅಥವಾ ಕನ್ಫರ್ಮ್ ಟಿಕೆಟ್ ಆಯಪ್‌ಗಳನ್ನು ಅಪ್‌ಡೇಟ್ ಮಾಡಿ, ಹೋಂ ಪೇಜ್‌ನಲ್ಲಿರುವ 'ಆರ್ಡರ್ ಫುಡ್ ಆನ್ ಟ್ರೇನ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ತಮ್ಮ ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸಂಖ್ಯೆಯನ್ನು ನಮೂದಿಸಿದರೆ, ಮುಂದಿನ ಯಾವ ನಿಲ್ದಾಣದಲ್ಲಿ ಆಹಾರ ಪಡೆಯಬಹುದು ಎಂಬ ಆಯ್ಕೆಗಳು ತೆರೆದುಕೊಳ್ಳುತ್ತವೆ. ಸ್ವಿಗ್ಗಿಯ ಸಾವಿರಾರು ಹೋಟೆಲ್‌ಗಳ ಪಟ್ಟಿಯಿಂದ ಬೇಕಾದ ತಿನಿಸುಗಳನ್ನು ಆಯ್ಕೆ ಮಾಡಿ ಆನ್‌ಲೈನ್ ಪಾವತಿ ಮಾಡಬಹುದು.


ವಿಶೇಷವೆಂದರೆ, ಪ್ರಯಾಣಿಕರು ತಾವು ಪ್ರಯಾಣ ಬೆಳೆಸುವ 4 ದಿನಗಳ ಮುಂಚಿತವಾಗಿ ಅಥವಾ ರೈಲು ನಿಲ್ದಾಣ ತಲುಪುವ ಕೇವಲ 30 ನಿಮಿಷಗಳ ಮೊದಲು ಕೂಡ ಆಹಾರವನ್ನು ಆರ್ಡರ್ ಮಾಡಬಹುದು. ಲೈವ್ ಟ್ರ್ಯಾಕಿಂಗ್ ಸೌಲಭ್ಯ ಕೂಡ ಇದ್ದು, ರೈಲಿನಲ್ಲಿ ಆರ್ಡರ್ ಮಾಡುವ ಎಲ್ಲಾ ಆಹಾರಗಳಿಗೆ ಸ್ವಿಗ್ಗಿ 'ಖಚಿತ ಡೆಲಿವರಿ ಅಥವಾ ಪೂರ್ಣ ಹಣ ಮರುಪಾವತಿ' ಭರವಸೆಯನ್ನು ನೀಡಿದೆ.

ಹಸಿವಿನ ಭಯವಿಲ್ಲದೆ ರೈಲು ಪ್ರಯಾಣ ಮಾಡಿ

ಈ ಹೊಸ ಸೇವೆಯ ಕುರಿತು ಮಾತನಾಡಿರುವ ಇಕ್ಸಿಗೋ ಮತ್ತು ಕನ್ಫರ್ಮ್ ಟಿಕೆಟ್‌ನ ಸಿಒಒ ಶ್ರೀಪಾದ್ ವೈದ್ಯ, 'ರೈಲು ಪ್ರಯಾಣವನ್ನು ಸುಲಭಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ನಮ್ಮ ತಂತ್ರಜ್ಞಾನವನ್ನು ಸ್ವಿಗ್ಗಿಯ ಬಲಿಷ್ಠ ಡೆಲಿವರಿ ಜಾಲದೊಂದಿಗೆ ಸಂಯೋಜಿಸುವ ಮೂಲಕ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದೇವೆ' ಎಂದಿದ್ದಾರೆ.

ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ ಪ್ರತಿಕ್ರಿಯಿಸಿ, 'ಭಾರತೀಯ ರೈಲ್ವೆಯಲ್ಲಿ ಪ್ರತಿದಿನ 1.8 ಕೋಟಿಗೂ ಹೆಚ್ಚು ಜನ ಪ್ರಯಾಣಿಸುತ್ತಾರೆ. ಇವರ ಹಸಿವಿನ ಸಮಸ್ಯೆಯನ್ನು ನೀಗಿಸಲು ಈ ಒಪ್ಪಂದ ನೆರವಾಗಲಿದೆ. ಮನೆಯಲ್ಲಿ ಸಿಗುವಂತಹ ಗುಣಮಟ್ಟದ ಆಹಾರವು ಇನ್ಮುಂದೆ ರೈಲು ಪ್ರಯಾಣದಲ್ಲೂ ಸಿಗಲಿದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೈದಾರಬಾದ್‌ ಬಿರಿಯಾನಿ

ರೈಲಿನಲ್ಲಿ ಬಿರಿಯಾನಿಯೇ ಕಿಂಗ್

ಸ್ವಿಗ್ಗಿ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳು ರೈಲು ಪ್ರಯಾಣಿಕರ ಆಹಾರ ಪದ್ಧತಿಯ ಬದಲಾವಣೆಯನ್ನು ತೆರೆದಿಟ್ಟಿದೆ. ರೈಲಿನಲ್ಲಿ ಪ್ರಯಾಣಿಸುವಾಗಲೂ ಜನರು ಅತಿ ಹೆಚ್ಚು ಆರ್ಡರ್ ಮಾಡುವ ಖಾದ್ಯವೆಂದರೆ ಅದು 'ಬಿರಿಯಾನಿ'. ಇದರ ಜೊತೆಗೆ ಪ್ರಾದೇಶಿಕ ತಿನಿಸುಗಳಾದ ವಡಾ ಪಾವ್, ಅಪ್ಪಂ, ಮತ್ತು ಲಿಟ್ಟಿ ಚೋಖಾಗಳಿಗೂ ಭಾರಿ ಬೇಡಿಕೆಯಿದೆ.

ಅಚ್ಚರಿಯ ವಿಚಾರವೆಂದರೆ, ರೈಲಿನಲ್ಲಿ ಬರುವ ಒಟ್ಟು ಆರ್ಡರ್‌ಗಳಲ್ಲಿ ಶೇ. 14ರಷ್ಟು ಪ್ರಯಾಣಿಕರು ಮಾಡುತ್ತಿಲ್ಲ. ಬದಲಾಗಿ ಮನೆಯಲ್ಲಿ ಕುಳಿತಿರುವ ಅವರ ಕುಟುಂಬಸ್ಥರು, ಪ್ರಯಾಣಿಸುತ್ತಿರುವ ತಮ್ಮ ಪ್ರೀತಿಪಾತ್ರರಿಗೆ ಮುಂದಿನ ನಿಲ್ದಾಣದಲ್ಲಿ ಬಿಸಿಯಾದ ಊಟ ಸಿಗಲೆಂದು ಸ್ವಿಗ್ಗಿ ಮೂಲಕ ಆರ್ಡರ್ ಮಾಡುತ್ತಿದ್ದಾರೆ. ದೊಡ್ಡ ಕುಟುಂಬಗಳು ಅಥವಾ ವಿದ್ಯಾರ್ಥಿಗಳ ಗುಂಪು ಒಂದೇ ಬಾರಿಗೆ 45ಕ್ಕೂ ಹೆಚ್ಚು ಐಟಂಗಳನ್ನು ಆರ್ಡರ್ ಮಾಡಿದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ ಈ ತ್ರಿವಳಿ ಸಂಸ್ಥೆಗಳ ಒಪ್ಪಂದವು ಭಾರತೀಯ ರೈಲು ಪ್ರಯಾಣಿಕರ ಊಟದ ಬವಣೆಯನ್ನು ನೀಗಿಸಿ, ಪ್ರಯಾಣವನ್ನು ಸುಖಮಯವಾಗಿಸಲು ಮುನ್ನುಡಿ ಬರೆದಿವೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries