ತಿರುಪತಿ: ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಹೈದರಾಬಾದ್ ಮೂಲದ ಭಕ್ತರೊಬ್ಬರು ಇಂದು (ಏ.13) ₹1 ಕೋಟಿ ದೇಣಿಗೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ದೇವಾಲಯದ ಆಡಳಿತ ಮಂಡಳಿ, 'ಅಲ್ಲೂರಿ ವರ್ಮಾ ಎಂಬುವರು ಟಿಟಿಡಿ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ₹1 ಕೋಟಿಗ ಹೆಚ್ಚು ದೇಣಿಗೆ ನೀಡಿದ್ದಾರೆ' ಎಂದು ತಿಳಿಸಿದೆ.
ಪ್ರಾಣದಾನ ಟ್ರಸ್ಟ್‌ಗೆ ದೇಣಿಗೆ ನೀಡಿದ ಹೈದರಾಬಾದ್ ಮೂಲದ ಅಲ್ಲೂರಿ ವರ್ಮಾ ಅವರು ಉಕ್ಕು ಉತ್ಪಾದನಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ನವೆಂಬರ್ 2001ರಲ್ಲಿ ಸ್ಥಾಪನೆಯಾದ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್, ಹೃದಯ, ಮೂತ್ರಪಿಂಡಗಳು, ಮಿದುಳು, ಕ್ಯಾನ್ಸರ್ ಮತ್ತು ಇತರೆ ಗಂಭೀರ ಸ್ವರೂಪದ ಕಾಯಿಲೆಯುಳ್ಳ ಬಡ ರೋಗಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

