ನವದೆಹಲಿ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಜಾರಿಗೆ ತರುವ ಕುರಿತು ಸಂಸತ್ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಹೀಗಾಗಿ ಕಲಾಪದಲ್ಲಿ ಕಡ್ಡಾಯವಾಗಿ ಎಲ್ಲರೂ ಹಾಜರಿರುವಂತೆ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿವೆ.
ಲೋಕಸಭೆಯಲ್ಲಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಗುರುವಾರ, ಶುಕ್ರವಾರ ಮತ್ತು ಶನಿವಾರದಂದು (ಏ.16,17 ಮತ್ತು 19) ಬೆಳಿಗ್ಗೆ 11 ಗಂಟೆಯಿಂದ ಸದನವನ್ನು ಮುಂದೂಡುವವರೆಗೂ ಹಾಜರಿದ್ದು, ಪಕ್ಷದ ನಿಲುವನ್ನು ಬೆಂಬಲಿಸುವಂತೆ ವಿನಂತಿಸಲಾಗಿದೆ. ಈ ಮೂರು ದಿನ ಸದನದಲ್ಲಿ ಕೆಲವು ಮುಖ್ಯವಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ವಿಪ್ನಲ್ಲಿ ನಮೂದಿಸಿ ಕಾಂಗ್ರೆಸ್ ತನ್ನ ಲೋಕಸಭಾ ಸದಸ್ಯರಿಗೆ ತಿಳಿಸಿದೆ. ಅದೇ ರೀತಿ, ಬಿಜೆಪಿಯೂ ತನ್ನ ಸದಸ್ಯರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಲು ವಿಪ್ನಲ್ಲಿ ಸೂಚಿಸಿದೆ.
ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ನಡೆಯುವ ವಿಶೇಷ ಸದನದ ಅಧಿವೇಶನದಲ್ಲಿ 'ನಾರಿ ಶಕ್ತಿ ವಂದನ ಅಧಿನಿಯಮ' ತಿದ್ದುಪಡಿ ಮಸೂದೆಯನ್ನು 2023ರಲ್ಲಿ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. 2029ರ ಮೊದಲು ಇದನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ.

