HEALTH TIPS

ಮಂಜೇಶ್ವರದ ವಿವಿಧೆಡೆ ರಾತ್ರಿ 8ರ ಆಸುಪಾಸಿನ ವರೆಗೂ ನಡೆದ ಮತದಾನ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆ  ಮತದಾನ ಬೆಳಿಗ್ಗೆ ಏಳಕ್ಕೆ ಆರಂಭಗೊಂಡು ಸಂಜೆ ಆರಕ್ಕೆ ಮುಗಿಯಬೇಕಿತ್ತಾದರೂ ಮಂಜೇಶ್ವರದ ವಿವಿಧ ಕಡೆ ರಾತ್ರಿ 8.30 ರ ವರೆಗೂ ಮತದಾನ ಮುಂದುವರಿಯಿತು. ಸಂಜೆಯ ಬಳಿಕ ಮತಗಟ್ಟೆಗೆ ಬಂದವರಿಗೆ ಸಮಯ ಪರಿಧಿಯೊಳಗೆ ಮತದಾನ ಮಾಡಲಾಗದೇ ಮುಂದುವರಿದು ಇದೇ ಮೊದಲ ಬಾರಿಗೆ ಮಂಜೇಶ್ವರದ ಮತದಾನ ಸತತ ಹದಿಮೂರೂವರೆ ತಾಸು ನಡೆದು ಇತಿಹಾಸ ಬರೆಯಿತು. ಸಮಯ ಪರಿಧಿಗಿಂತ ಎರಡೂವರೆ ತಾಸು ಮತದಾನ ಮುನ್ನಡೆದರೂ ಸರದಿ ಸಾಲಲ್ಲಿ ನಿಂತವರು ಮತ ಚಲಾಯಿಸಿದ ಬಳಿಕವೇ ಮತದಾನ ಅಂತ್ಯಗೊಂಡಿತು.


ಮಂಜೇಶ್ವರದ ಹೊಸಬೆಟ್ಟು ಕಡಪ್ಪರದ ಬೂತ್ ನಂಬರ್ 24-25 ರಲ್ಲಿ ಮತದಾನ ಮುಗಿಯುವಾಗ ರಾತ್ರಿ 8.15 ರ ವೇಳೆಯಾಗಿತ್ತು. ಉಳಿದಂತೆ ವರ್ಕಾಡಿ, ಬಾಕ್ರಬ?ಲು, ಕುಂಜತ್ತೂರು, ತೂಮಿನಾಡು ಮತಗಟ್ಟೆಗಳಲ್ಲಿ ಸಂಜೆ ಆರು ಗಂಟೆಗೆ ಸರದಿ ಸಾಲಲ್ಲಿದ್ದವರಿಗೆ ಮತ ಚಲಾಯಿಸುವ ಅವಕಾಶ ಸಿಗದ ಕಾರಣ ಮತದಾನ ಮುಂದುವರಿಯಿತು

ರಾತ್ರಿ ಏಳರ ತನಕ ಮತ್ತು ಬಳಿಕವೂ ಮುಂದುವರಿದು, ಮಂಜೇಶ್ವರದ ಒಟ್ಟು ಮತದಾನ ಕೊನೆಗೊಳ್ಳುವಾಗ ಸಮಯ 8.15 ಆಗಿತ್ತು.

ಏನಾಗಿತ್ತು?

ಮತದಾನ ವಿಳಂಬವಾಗಲು ಚುನಾವಣಾ ಆಯೋಗ ಒದಗಿಸಿದ ಇವಿಎಂ ಬ್ಯಾಲೆಟ್ ಮತಯಂತ್ರಗಳೇ ಕಾರಣ ಎನ್ನಲಾಗಿದೆ. ಒಬ್ಬರು ಮತದಾನ ಮಾಡಿದ ಬಳಿಕ ಮತ ಚಲಾವಣೆಯಾದ ಬೀಪ್ ಸೌಂಡ್ ಮೊಳಗಲು ಕೆಲವೆಡೆ ಒಂದೆರೆಡು ಮಿನಿಟಿನ ವರೆಗೂ ತಗುಲುತಿತ್ತು. ಆದ್ದರಿಂದ ಒಬ್ಬರ ಮತದಾನಕ್ಕೆ ಕನಿಷ್ಟ ಮೂರ್ನಾಲ್ಕು ಮಿನಿಟು ವಿನಿಯೋಗವಾದದ್ದು ಪ್ರಧಾನ ಸಮಸ್ಯೆ. ಇನ್ನೊಂದೆಡೆ ಕೆಲವೆಡೆ ಮತಯಂತ್ರ ಆರಂಭದಲ್ಲೇ ಕ?ಕೊಟ್ಟು ಸಮರ ಕಬಳಿಸಿದರೆ, ಅನೇಕರು ಬಿಸಿಲಿನ ಬೇಗೆ ತಪ್ಪಿಸಲು ಸಂಜೆ ಮತಗಟ್ಟೆಗೆ ಬಂದರೆಂಬುದೂ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಮಂಜೇಶ್ವರ ಮಂಡಲದಲ್ಲಿ ಭರ್ಜರಿ ಮತದಾನ ದಾಖಲಾಗಿದೆ.

ರಾತ್ರಿ 8.25ಕ್ಕೆ ಚುನಾವಣಾ ಆಯೋಗ ಅಧಿಕೃತವಾಗಿ ನೀಡಿದ ಮಾಹಿತಿಯಂತೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 78.67 ಶೇ. ಮತದಾನವಾಗಿದೆ. ಐದು ಮಂಡಲಗಳ ಪೈಕಿ ಮಂಜೇಶ್ವರದಲ್ಲಿ 81.04 ಶೇ. ಮತದಾನವಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries