ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಚೆರ್ಕಳ ಸನಿಹದ ತೆಕ್ಕಿಲ್ ಹಾಗೂ ಬೇವಿಂಜ ಪ್ರದೇಶದಲ್ಲಿ ಅಗೆಯುವ ಕಾರ್ಯ ನಡೆಯುತ್ತಿರುವುದರಿಂದ ಏಪ್ರಿಲ್ 11 ರಂದು ಬೆಳಿಗ್ಗೆ 8ರಿಂದ ಎರಡು ವಾರಗಳ ಕಾಲ ಪ್ರಸಕ್ತ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ನಿಟ್ಟಿನಲ್ಲಿ ಕಣ್ಣೂರಿನಿಂದ ಕಾಸರಗೋಡಿಗೆ ಆಗಮಿಸುವ ವಾಹನಗಳು ಕಾಞಂಗಾಡು ದಕ್ಷಿಣದಿಂದ ಕೆಎಸ್‍ಟಿಪಿ ರಸ್ತೆ ಮೂಲಕವೂ, ಪೆರಿಯಾ, ಪೊಯಿನಾಚಿಯಿಂದ ಕಾಸರಗೋಡಿಗೆ ತೆರಳುವ ವಾಹನಗಳು ಚಟ್ಟಂಚಾಲ್ ಮೇಲ್ಸೇತುವೆ ಪ್ರವೇಶಿಸದೆ, ಸರ್ವಿಸ್ ರಸ್ತೆಗೆ ಪ್ರವೇಶಿಸಿ ಪರವನಡ್ಕ, ದೇಳಿ ರಸ್ತೆ ಮೂಲಕ ಪ್ರಯಾಣ ಮುಂದುವರಿಸಿ ಕೆಎಸ್‍ಟಿಪಿ ರಸ್ತೆಗೆ ಸಂಚರಿಸಿ ಚಂದ್ರಗಿರಿ ಸೇತುವೆ ಮೂಲಕ ಕಾಸರಗೋಡು ಪ್ರವೇಶಿಸಬೇಕು.
ಮಂಗಳೂರಿನಿಂದ ಕಣ್ಣೂರು ಕಡೆಗೆ ಸಂಚರಿಸುವ ವಾಹನಗಳು ಕಾಸರಗೋಡು ಬಳಿಯ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ, ಕಾಸರಗೋಡು ಹಳೇ ಪ್ರೆಸ್ ಕ್ಲಬ್ ಜಂಕ್ಷನ್‍ನಿಂದ ಕೆಎಸ್‍ಟಿಪಿ ರಸ್ತೆ ಮೂಲಕ ಚಂದ್ರಗಿರಿ ಸಏತುವೆ ಹಾದಿಯಾಘಿ ಕಣ್ಣೂರು ಕಡೆಗೆ ಸಾಗಬೇಕು. ಸಾರ್ವಜನಿಕರು ಸಂಚಾರ ವ್ಯವಸ್ಥೆಗಳನ್ನು ಪಾಲಿಸುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಕಟಣೆ ತಿಳಿಸಿದೆ.


