ಜೆರುಸಲೆಮ್: ಲೆಬನಾನ್ ದೇಶದ ಜೊತೆ ಶೀಘ್ರವೇ ನೇರ ಮಾತುಕತೆ ನಡೆಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಕದನ ವಿರಾಮ ಘೋಷಿಸಿ 24 ಗಂಟೆ ಕಳೆಯುವ ಮುನ್ನವೇ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿತ್ತು.
ಈ ದಾಳಿಯಲ್ಲಿ 112 ಮಂದಿ ಮೃತಪಟ್ಟಿದ್ದು, 837 ಮಂದಿ ಗಾಯಗೊಂಡಿದ್ದಾರೆ.
ಲೆಬನಾನ್ ಮತ್ತು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿರುವುದಾಗಿ ಇಸ್ರೇಲ್ ಹೇಳಿಕೆ ನೀಡಿತ್ತು. ಈ ಬೆನ್ನಲೇ ಲೆಬನಾನ್ ದೇಶದ ಜೊತೆ ಶೀಘ್ರವೇ ನೇರ ಮಾತುಕತೆ ನಡೆಸಲಾಗುವುದು ಎಂದು ಇಸ್ರೇಲ್ ಖಚಿತಪಡಿಸಿದೆ.
ಲೆಬನಾನ್ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಈ ನಡುವೆ ಇಸ್ರೇಲ್‌ನಿಂದ ಈ ಘೋಷಣೆ ಹೊರಬಿದ್ದಿದೆ.

