ಕಾಸರಗೋಡು: ಮಂಜೇಶ್ವರ ಕೊಡ್ಲಮೊಗರು ಸಂಕದಕಟ್ಟೆ ಓರ್ಕಳ ನಿವಾಸಿ ಹರಿಪ್ರಕಾಶ್ ಡಿ'ಸೋಜಾ (37) ಎಂಬವರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬೋರ್ಕಳ ನಿವಾಸಿ ಅರಿಫ್ ಬಿ (38) ಎಂಬಾತನನ್ನು ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಝರುಪಡಿಸಲಾಘಿದ್ದು, ನ್ಯಾಯಾಂಗ ಬಂಧನ ವಿಧೀಸಲಾಗಿದೆ.
ಏ. 6ರಂದು ಬೋರ್ಕಳದ ಅಂಗಡಿಯೊಂದರ ಮುಂಭಾಗದಲ್ಲಿ ಹರಿಪ್ರಕಾಶ್ ಡಿ'ಸೋಜಾ ಅವರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿದ್ದು, ಈ ಬಗ್ಗೆ ಆರಿಫ್ ವಿರುದ್ಧ ಮಂಜೇಶ್ವರ ಪೆÇಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಮರಳು ಸಾಗಾಟದ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ಹರಿಪ್ರಕಾಶ್‍ಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

.webp)
