ಕುಂಬಳೆ: ಕಾಲೇಜು ವಿದ್ಯಾರ್ಥಿಯ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ, ಕುಂಬಳೆ ನಿವಾಸಿ ಅನಸ್ (24)ಕುಂಬಳೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಉಳಿದ ಏಳು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕುಂಬಳೆ ಮಟ್ಟಂಕುಳಿ ನಿವಾಸಿ, ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿ ಮೊಹಮ್ಮದ್ ಅಫ್ನಾನ್ ಫಹಾದ್ ಎಂಬವರ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. ಮಾರ್ಚ್ 31 ರಂದು, ಫಹಾದ್ ಕುಂಬಳೆಯಲ್ಲಿ ನಿಂತಿದ್ದ ಸಂದರ್ಭ ಕಾರುಗಳಲ್ಲಿ ಆಗಮಿಸಿದ ತಂಡ ಸೈಕಲ್ ಚೈನ್, ಪಂಚ್, ರ್ಯಾಪ್ ಮತ್ತು ಸ್ಟಿಕ್ ಮೊದಲಾದ ಆಯುಧಗಳಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದ ಇತರ ಆರೋಪಿಗಳಾದ ಹಾಸಿಮ್, ಅಮ್ಮಿ, ಮಿಯಾಲ್, ಫಿರೋಜ್, ಮಿನಾಜ್, ಫಸಲು ಮತ್ತು ಜಸ್ಸಿ ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.

.webp)
