ಮಂಜೇಶ್ವರ: ವರ್ಕಾಡಿ ಬೋರ್ಕಳ ನಿವಾಸಿ ಹಾಗೂ ವ್ಯಾಪಾರಿ ವಾಮನ ಬೋರ್ಕಳ (56)ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ವರ್ಕಾಡಿ ಬೇಕರಿ ಜಂಕ್ಷನ್‍ನಲ್ಲಿ ವ್ಯಾಪಾರಿಯಾಗಿದ್ದ ಇವರುಪತ್ರಿಕಾ ಏಜೆಂಟ್ ಆಗಿದ್ದರು. ವಿವಿಧ ಪತ್ರಿಕೆಗಳಿಗೆ ಸ್ಥಳೀಯ ಸುದ್ದಿಗಳನ್ನು ಪೂರೈಸುತ್ತಿದ್ದ ಇವರು ಯಕ್ಷಗಾನಪ್ರೇಮಿಯಾಗಿ, ಹಲವಾರು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುತ್ತಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ರಂಗಗಳಲ್ಲೂ ಗುರುತಿಸಿಕೊಂಡಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


