ಕಾಸರಗೋಡು: ಪಾಲಕುನ್ನು ಕರಿಪ್ಪೊಡಿ ಶ್ರೀ ತಿರೂರ್ ಮುಚ್ಚಿಲೊಟ್ ಭಗವತಿ ದೇವಸ್ಥಾನದ ಪೆರುಂಕಳಿಯಾಟ ಮಹೋತ್ಸವವನ್ನು 16 ವರ್ಷಗಳ ನಂತರ ನಡೆಸಲು ನಿರ್ಧರಿಸಲಾಗಿದ್ದು, ಪೆರುಂಗಾಳಿಯಾಟ ಮಹೋತ್ಸವದ ಸಂಘಟನಾ ಸಮಿತಿ ಸಭೆ ಏಪ್ರಿಲ್ 12 ರಂದು ಮಧ್ಯಾಹ್ನ 2.30 ಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸುವರು ಎಂದು ಪಾಲಕುನ್ನು ಕರಿಪ್ಪೊಡಿ ದೇವಸ್ಥಾನದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂಚಾಯಿತಿ ಅಧ್ಯಕ್ಷ ಪಿ.ವಿ. ರಾಜೇಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್. ಕುಂಞಂಬು, ಜಿಪಂ ಮಾಜಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಕೆ. ಸುಜಾತ, ಅಪರಾಧ ವಿಭಾಗದ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಾಲಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೆರುಂಕಳಿಯಾಟ ಮಹೋತ್ಸವವನ್ನು 20207 ಜನವರಿ 22 ರಿಂದ 27 ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ವಾಣಿಯ ಸಮುದಾಯದ ಕುಲದೇವತೆ ಮುಚ್ಚಿಲೋಟ್ ಭಗವತಿಯ ಜೊತೆಗೆ ಕನ್ನಂಗಾಟ್ ಭಗವತಿ, ಪುಲಿಯೂರು ಕಾಳಿ, ಪುಲಿಯೂರು ಕಣ್ಣನ್, ನರಂಬಿಲ್ ಭಗವತಿ, ಮೂವಾಳಂಕುಯಿ ಚಾಮುಂಡಿ, ಕೋಲ ಸ್ವರೂಪ ತಾಯಿ, ವಿಷ್ಣುಮೂರ್ತಿ, ಪಂಜುರುಳಿ ದೈವಗಳ ಆರಧನೆಯೂ ನಡೆಯಲಿದೆ.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಂಬು ಞÉೀಕ್ಲಿ, ಉಪಾಧ್ಯಕ್ಷ ರವಿ ಕಳನಾಡ್, ಪ್ರಧಾನ ಕಾರ್ಯದರ್ಶಿ ವಿ.ವಿ. ಕೃಷ್ಣನ್ ಮಾಸ್ಟರ್, ಕೋಶಾಧಿಕಾರಿ ತಂಬಾನ್ ಚೇಡಿಕುನ್ನು, ವಿ.ವೇಣು ಗೋಪಾಲನ್, ಜಗನ್ ಕರ್ತಾ ತರಕ್ಕಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



