ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ಕಾಸರಗೋಡು ತಾಲೂಕು ಮವ್ವಾರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಭೆ ಮವ್ವಾರು ಎಯುಪಿ ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಘಟಕದ ಸ್ವಯಂ ಸೇವಕರಿಗೆ ಬ್ಯಾಗ್ ವಿತರಣೆ ನಡೆಯಿತು.
ಧ.ಗ್ರಾ. ತಾಲ್ಲೂಕು ಯೋಜನಾಧಿಕಾರಿ ದಿನೇಶ್ ಮಾತನಾಡಿ, ಕಳೆದ 3 ವರ್ಷಗಳಿಂದ ಕಾಸರಗೋಡು ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು 4 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ನಾಲ್ಕು ಘಟಕಗಳಲ್ಲಿ 84 ಜನ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆ, ಬಡ ಕುಟುಂಬದವರಿಗೆ ಮನೆ ನಿರ್ಮಾಣ ಮತ್ತು ದುರಸ್ಥಿ ಕೆಲಸ, ಊರಿನ ದೇವಸ್ಥಾನದಲ್ಲಿ ಶ್ರಮದಾನ ಇನ್ನಿತರ ಸಾಮಾಜಿಕ ಚಟುವಟಿಕೆಯಲ್ಲಿ ಘಟಕದ ಸ್ವಯಂ ಸೇವಕರು ಭಾಗಿಯಾಗುತ್ತಾರೆ ಎಂದು ಹೇಳಿದರು.
ಘಟಕದ ಸದಸ್ಯೆ ದಾಕ್ಷಾಯಿಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಮ್, ಶೌರ್ಯ ಘಟಕದ ಮಾಸ್ಟರ್ ಜಗನ್ನಾಥ, ಘಟಕ ಸಂಯೋಜಕಿ ರಾಜೇಶ್ವರಿ ಬಲ್ಲಾಳ್, ಘಟಕ ಪ್ರತಿನಿಧಿ ಪದ್ಮನಾಭ ಹಾಗೂ ಸ್ವಯಂ ಸೇವಕರಾದ ಕೊರಗಪ್ಪ ಬೆಳ್ಳಿಗೆ, ಅಶೋಕ ಆಚಾರ್ಯ, ಶಶಿಧರ, ಸುರೇಶ, ನಾಗೇಶ, ಪ್ರಕಾಶ, ರಾಜೇಂದ್ರ, ಅಜಯ್, ವಿಶ್ವನಾಥ ಉಪಸ್ಥಿತರಿದ್ದರು.

.jpg)
.jpg)
