ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದಲ್ಲಿ ಮೇ 5 ರಂದು ನಡೆಯುವ ವಿಶೇಷ ಮೂಡಪ್ಪ ಸೇವೆ ಹಾಗೂ ಚಂಡಿಕಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಸೇವಾ ಸಮಿತಿಯ ಹಿರಿಯ ಉಪಾಧ್ಯಕ್ಷ À್ರಭಾಕರ ರೈ ಮಠದಮೂಲೆ ವಹಿಸಿದ್ದರು. ಹಿರಿಯ ಧಾರ್ಮಿಕ ಮುಂದಾಳು ನಿತ್ಯಾನಂದ ಶೆಣ್ಯೆ ಹಾಗೂ ನಿವೃತ್ತ ಜಿಲ್ಲಾ ಹೆಲ್ತ್ ಎಜ್ಯುಕೇಶನ್ ಆಫೀಸರ್ ರಾಮಚಂದ್ರ ಮಾರ್ಪನಡ್ಕ ಅವರು ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ವಿಶೇಷ ಮೂಡಪ್ಪ ಸೇವೆ ಹಾಗೂ ಚಂಡಿಕಾ ಯಾಗದ ರಶೀದಿ ಪುಸ್ತಕಗಳನ್ನು ವಿಶೇಷ ಮೂಡಪ್ಪ ಸೇವಾ ಕಾರ್ಯಕ್ರಮದ ಸಲಹಾ ಸಮಿತಿ ಸದಸ್ಯೆ ವಾಣಿ ಪ್ರಸಾದ್ ಅಮ್ಮಣ್ಣಾಯ ಅವರಿಗೆ ನೀಡಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಶಂಕರನಾರಾಯಣ ಮಯ್ಯ, ಶ್ರೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಸಾದ ಮಣಿಯಾಣಿ ಗೋಸಾಡ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಚಡಗ ಗೋಸಾಡ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಮಾತೃ ಮಂಡಳಿಯ ಅಧ್ಯಕ್ಷೆ ಲಲಿತ ಸುಬ್ಬ ಪಾಟಾಳಿ ಗೋಸಾಡ, ಸಮಿತಿಯ ಸದಸ್ಯರುಗಳಾದ ಬಾಲಕೃಷ್ಣ ಕೆ.ಕೆ. ಏತಡ್ಕ, ಗಂಗಾಧರ ರೈ ಮಠದಮೂಲೆ, ಸೀತಾರಾಮ ರೈ ಮುಂಡ್ರಕೊಳಂಜಿ ಮುಂತಾದವರು ಉಪಸ್ಥಿತರಿದ್ದರು. ಪ್ರಸಿದ್ಧ ಗಾಯಕ ವಸಂತ್ ಕುಮಾರ್ ಗೋಸಾಡ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಕಾರ್ಯದರ್ಶಿ ಸದಾಶಿವ ರೈ ಸ್ವಾಗತಿಸಿ, ಸದಸ್ಯ ನಾರಾಯಣ ಗೋಸಾಡ ವಂದಿಸಿದರು. ಸಲಹಾ ಸಮಿತಿಯ ಸದಸ್ಯ ಅಮೃತ್ ರಾಜ್ ರೈ ಮರತ್ತಿಲ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ ಅವರ ವತಿಯಿಂದ ಅನ್ನ ಸಂತರ್ಪಣೆ ಜರಗಿತು.

.jpg)
.jpg)
