HEALTH TIPS

ವರ್ಕಾಡಿ ದೇವೇಂದಪಡ್ಪು ಮಹಾ ವಿಷ್ಣು ದೇವಸ್ಥಾನ ಜಾತ್ರೆ-ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ವರ್ಕಾಡಿ ದೇವೇಂದಪಡ್ಪು  ಮಹಾ ವಿಷ್ಣು ದೇವಸ್ಥಾನದಲ್ಲಿ ಪಲಿಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯೊಂದಿಗೆ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಯವರ ಮಾರ್ಗದರ್ಶನದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮೇ 2ರಂದು ಜರುಗಲಿರುವುದು.    


ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಅರ್ಚಕ ರಾಘವೇಂದ್ರ ಆಚಾರ್ಯರು ಬಿಡುಗಡೆಗೊಳಿಸಿದರು.  ಗಡಿ ಪ್ರಧಾನರಾದ ನೆತ್ತಿಲ ಬಾಳಿಕೆ ದೇವು ಶೆಟ್ಟಿ , ಕ್ಷೇತ್ರದ ಜೀರ್ಣೋದ್ದಾರ  ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮೊರ್ಲ, ಕಾರ್ಯದರ್ಶಿ ಮೋಹನ್‍ದಾಸ್ ಶೆಟ್ಟಿ ನೆತ್ತಿಲ, ಸದಸ್ಯರಾದ ಪ್ರೇಮಾನಂದ ರೈ ನೆತ್ತಿಲ ಕೋಡಿ, ಮಾಧವ ಪೂಜಾರಿ ಕುದುಕೋರಿ ,  ರವಿ ಮುಡಿಮಾರು, ಕೇಶವ ಕಜೆ ಕಿನ್ಯ, ಶಾಂಭ ನಾಯ್ಗ ಕೆದುಂಬಾಡಿ, ಅಲ್ಲದೆ ಮಹಿಳಾ ಸಮಿತಿಯ ಸದಸ್ಯೆಯವರು  ಉಪಸ್ಥಿತರಿದ್ದರು. 

ಮೇ 2ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಮನು ಸೂಕ್ತ ಹೋಮ, ವಾಯು ಸ್ತುತಿ ಪುರಸ್ಚರಣ ಹೋಮ, ಪ್ರಧಾನ ಹೋಮ, ಕಲಶಾಭಿಷೇಕ, ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಸನ್ನಿಧಿಯಲ್ಲಿ ಕಳಸ ಪೂಜೆ, ವಿವಿಧ ಅಭಿಷೇಕ, ತಂಬಿಲ ಸೇವೆ, ಶ್ರೀ ದೇವರ ಬಲಿ, ನಂತರ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯುವುದು.  

ಸಂಜೆ 6ಕ್ಕೆ ಹೂವಿನ ಪೂಜೆ, ರಂಗ ಪೂಜೆ ನಂತರ ಶ್ರೀದೇವರ ಉತ್ಸವ ಬಲಿ ರಾಜಾಂಗಣ ಪ್ರಸಾದ ನಡೆಯುವುದು.  ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಶಾರದಾ ಆಟ್ರ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ 'ಕಥೆ ಎಡ್ಡೆಂಡು'ಹಾಸ್ಯ ನಾಟಕ ಪ್ರದರ್ಶನ ಗೊಳ್ಳುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries