ಕಾಸರಗೋಡು: ವಿದ್ಯುತ್ ವೋಲ್ಟೇಜ್ ಏರಿಳಿತದ ಹಿನ್ನೆಲೆಯಲ್ಲಿ ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಮುಳಿಯಾರ್ ಮತ್ತು ಚೆಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏ. 21ರ ವರೆಗೆ ಶುದ್ಧ ಕುಡಿಯುವ ನೀರಿನ ವಿತರಣೆಯಲ್ಲಿ ಆಂಶಿಕ ವ್ಯತ್ಯಯ ಉಂಟಾಗಲಿರುವುದಾಗಿ ಕೇರಳ ಜಲ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.

