ಪೆರ್ಲ: ಭೂಮಿಕಾ ಸಂಡೇ ಥಿಯೇಟರ್ಸ್ ಸ್ವರ್ಗ ಹಾಗೂ ಸಹೋದರ ಸಂಸ್ಥೆಗಳಾದ ಎಂ.ಕೆ. ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಮತ್ತು ಮಾತೃಭೂಮಿ ಸ್ವರ್ಗ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಸ್ಪರ್ಗದಲ್ಲಿ ರಂಗದೀಪಿಕಾ 2026 ರಂಗ ತರಬೇತಿ ಏಕದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧ್ಯಾಪಕ, ಸಂಶೋಧಕ, ಯಕ್ಷಗಾನ ಭಾಗವತ ಡಾ.ಸತೀಶ್ ಪುಣಿಚಿತ್ತಾಯ ಪೆರ್ಲ ಅವರು ಮಾತನಾಡಿ, ನಾಟಕದ ಪರಂಪರೆ ಮತ್ತೆ ಸ್ವರ್ಗದಲ್ಲಿ ಆರಂಭವಾಗಿದೆ. ಇದು ನಿಂತ ನೀರಾಗದಿರಲಿ ಎಂದರು.
ಬಾಲಕೃಷ್ಣ ಗ್ರಂಥಾಲಯ ಹಾಗೂ ವಾಚನಾಲಯದ ಅಧ್ಯಕ್ಷ ರವಿರಾಜ್ ಸ್ವರ್ಗ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್. ಮಾತನಾಡಿ, ತಮ್ಮ ನಾಟಕದ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಗ್ರಾ.ಪಂ.ಸದಸ್ಯ ರಾಮಚಂದ್ರ ಎಂ. ನಾಟಕದ ಆಸಕ್ತಿಯ ಬಗ್ಗೆ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ ಅವರು ಭೂಮಿಕಾ ಸಂಡೆ ಥಿಯೇಟರ್ ಹಲವು ಮಕ್ಕಳ ಪ್ರತಿಭೆಗಳಿಗೆ ನಾಂದಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ನಾಟಕ ಕಲಾವಿದ ಬಾಬು ಪೂಜಾರಿ ಬೈರಡ್ಕ ಅವರನ್ನು ಗೌರವಿಸಲಾಯಿತು. ರಂಗ ತರಬೇತಿಯ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ರಂಗ ನಿರ್ದೇಶಕ ಉದಯ ಸಾರಂಗ್ ಹಾಗೂ ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ರಂಗ ತರಬೇತಿ ನೀಡಿ ರಂಗಾಭಿನಯ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವೈಷ್ಣವಿ ಕುಮಾರಿ, ಅಭಿಜ್ಞಾ ಕುಮಾರಿ, ದೀಪಿಕಾ ಪ್ರಾರ್ಥಿಸಿದರು. ಸಂಚಾಲಕ ಶ್ರೀನಿವಾಸ ನಾಯ್ಕ್ ಪೆರಿಕ್ಕಾನ ಸ್ವಾಗತಿಸಿ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
