ಕಾಸರಗೋಡು: ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೂಲ ಸೌಲಭ್ಯ ಶೀಘ್ರ ಪೂರ್ಣಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಜಿಲ್ಲಾಧಿ ನೇತೃತ್ವದಲ್ಲಿ ನಡೆದ ಮಾಸಿಕ ಅವಲೋಕನಾ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಕೀಯ ಕಾಲೇಜು ಆವರಣದೊಳಗೆ ಬಂದರು ಎಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗ್ದಿ, ನಿರ್ಮಾಣ ಹಂತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಆಸ್ಪತ್ರೆ ಕಟ್ಟಡದ ನಿರ್ಮಾಣ ಕಾರ್ಯ ಪುನಾರಂಭಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ಹಾಸ್ಟೆಲ್‍ಗಳ ವಿದ್ಯುತ್ ವಯರಿಂಗ್ ಕೆಲಸವೂ ಪೂರ್ಣಗೊಳಿಸಲಾಗಿದ್ದು, ಮುಂದಿನ ತಿಂಗಳು ತೆರೆದು ಕಾರ್ಯಾಚರಿಸಲಿದೆ. ಆಸ್ಪತ್ರೆ ಆವರಣಗೋಡೆಯ ನಿರ್ಮಾಣ ಕಾರ್ಯಕ್ಕಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದು, ಮುಖ್ಯ ದ್ವಾರದ ನಿರ್ಮಾಣ ಕಾರ್ಯ, ವೈದ್ಯಕೀಯ ಕಾಲೇಜು ಪ್ರಯೋಗಾಲಯದ ಕಾರ್ಯಾರಂಭ ಶೀಘ್ರ ನಡೆಸುವಂತೆ ಸೂಚಿಸಲಾಯಿತು. ವೈದ್ಯಕೀಯ ಕಾಲೇಜಿಗಾಗಿ ಮುಂದಿನ ತಿಂಗಳು ಆಂಬ್ಯುಲೆನ್ಸ್ ಓಡಾಟ ಆರಂಭಿಸಲಿರುವುದಾಗಿಯೂ ಮಾಹಿತಿ ನೀಡಲಾಯಿತು.
ಆಸ್ಪತ್ರೆ ಕ್ಯಾಂಟೀನ್, ಶವಾಗಾರ, ದ್ರವ ತ್ಯಾಜ್ಯ ಸಂಸ್ಕರಣಾ ಘಟಕ, ಆಟದ ಮೈದಾನ, ಒಳಾಂಗಣ ನ್ಯಾಯಾಲಯ ಮತ್ತು ಇತರ ಹಾಸ್ಟೆಲ್‍ಗಳ ನಿರ್ಮಾಣವನ್ನು ತ್ವರಿತಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕಾಸರಗೋಡು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎ. ಅರುಣ್‍ಕುಮಾರ್, ಉಪ ಪ್ರಾಂಶುಪಾಲ ಟಿ. ಜಿ. ಸಿಂಧು, ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಧೀಕ್ಷಕ ಡಾ. ಆರ್. ಪ್ರವೀಣ್, ಜನರಲ್ ಮೆಡಿಸಿನ್ ಎಚ್‍ಒಡಿ ಡಾ. ಆರ್. ಹರಿಕೃಷ್ಣನ್, ಫೆÇೀರೆನ್ಸಿಕ್ ಮೆಡಿಸಿನ್ ಎಚ್‍ಒಡಿ ವೈದ್ಯ ಪಿ ಟಿ ರತೀಶ್, ನಸಿರ್ಂಗ್ ಕಾಲೇಜು ಪ್ರಾಂಶುಪಾಲೆ ಪಿ ಎಸ್ ಶೋಭಾ, ಎಂಬಿಬಿಎಸ್ ಹಾಸ್ಟೆಲ್ ಸಹಾಯಕ ವಾರ್ಡನ್ ಡಾ ಕಂಠೆ ಇಳಂಕೋವನ್, ಎಲ್‍ಎಸ್‍ಜಿಡಿ ಉಪ ನಿರ್ದೇಶಕ ಕೆ ವಿ ಹರಿದಾಸ್, ಕೆಡಬ್ಲ್ಯೂಎ ಸಹಾಯಕ ಎಂಜಿನಿಯರ್ ಜಿ ಮಂಜು, ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಪಿ ರೇಷ್ಮಾ, ಹಾರ್ಬರ್ ಎಂಜಿನಿಯರಿಂಗ್ ಸಹಾಯಕ ಎಂಜಿನಿಯರ್ ಎಂ.ರಾಜೀವನ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ವಿ. ಚಂದ್ರನ್, ಕಿಟ್ಕೊ ಪ್ರತಿನಿಧಿಗಳಾದ ವಿ. ನಿತಿನ್ ಮತ್ತು ಟೋನಿ ಜಾರ್ಜ್ ಉಪಸ್ಥಿತರಿದ್ದರು.



