HEALTH TIPS

ಧರ್ಮದ ಒಳಗಿರುವ ಸತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು - ವಾಸುದೇವ ತಂತ್ರಿ ಕುಂಟಾರು

ಬದಿಯಡ್ಕ: ನಿಷ್ಠೆ, ಅನುಷ್ಠಾನ, ವಿಶ್ವಾಸಗಳು ನಮ್ಮನ್ನು ರಕ್ಷಿಸುತ್ತದೆ. ಸಕಾರಾತ್ಮಕ ದಾರಿಯಲ್ಲಿ ನಾವು ಸಾಗಿದಾಗ ನಮ್ಮನ್ನು ದೇವರು ಕಾಯುತ್ತಾರೆ. ನಮ್ಮ ಶಕ್ತಿಮೀರಿ ಮಾಡಿದ ಸಹಾಯ ದೇವರನ್ನು ಸೇರುತ್ತದೆ. ಕ್ಷೇತ್ರದ ಉದ್ಧಾರಕ್ಕಾಗಿ ಸ್ವಯಂಸೇವಕರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಮೆರೆದಿದ್ದಾರೆ. ಎಳವೆಯಲ್ಲಿಯೇ ಮಕ್ಕಳಿಗೆ ಧಾರ್ಮಿಕ ಬೋಧನೆಯನ್ನು ನೀಡಬೇಕು. ಧರ್ಮದ ಒಳಗಿರುವ ಸತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂದು ಹಿರಿಯರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ನುಡಿದರು.


ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 6ನೇ ದಿನ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. 

ಹಿರಿಯ ನ್ಯಾಯವಾದಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಐ.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಸ್.ಪಿ.ಹರಿಶ್ಚಂದ್ರ ನಾಯ್ಕ ಮಾತನಾಡಿ ಹಿಂದೂ ಧರ್ಮ, ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ ದೇವಸ್ಥಾನಗಳು. ದೇವರ ಶಕ್ತಿಯಿಂದ ಮಾತ್ರ ಓರ್ವ ಮಾನವ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. 

ಶ್ರೀ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಮಾತನಾಡಿ, ಸ್ವಯಂಸೇವಕರ ಬೆವರಿನ ಫಲ, ದಾನಿಗಳ ಸಹಕಾರದಿಂದ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯನ್ನು ಕಾಣುತ್ತಿವೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಯುವ ಜನಾಂಗವು ಸಂಸ್ಕøತಿಯ ಸತ್ವವನ್ನು ತಿಳಿಯದೆ ಜೀವಿಸುತ್ತಿರುವುದು ಆತಂಕಕಾರಿಯಾಗಿದೆ. ಬದುಕು ಎಂದರೆ ಏನು, ಹೇಗೆ ಬದುಕಬೇಕು ಎಂಬುದನ್ನು ತಿಳಿಯಬೇಕು. ನಾವು ಕಾಣದ ದೈವಿಕ ಶಕ್ತಿಯು ನಮ್ಮನ್ನು ಮುನ್ನಡೆಸುತ್ತದೆ ಎಂಬುದನ್ನು ಎಲ್ಲರೂ ಮರೆತಂತಿದೆ. ಧರ್ಮದ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಎಂದರು. 

ನವನೀತಕೃಷ್ಣ ನವಕಾನ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಡಾ. ಸುಬ್ರಹ್ಮಣ್ಯ ಭಟ್ ಖಂಡಿಗೆ, ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗೋಪಾಲ ಭಟ್ ಪಟ್ಟಾಜೆ, ನಿವೃತ್ತ ಬ್ಯಾಂಕ್ ಪ್ರಬಂಧಕ ದುರ್ಗಾಪ್ರಸಾದ್ ರೈ ಕಲ್ಲಕಳಯ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ, ಗುತ್ತಿಗೆದಾರ ವಾಸುದೇವ ಹೊಳ್ಳ ಮಧೂರು, ವಿಶ್ರಾಂತ ಸಹಾಯಕ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ಮಾತೃಪ್ಪಾಡಿ, ಸಾಮಾಜಿಕ ಕಾರ್ಯಕರ್ತ ಶ್ಯಾಮಪ್ರಸಾದ ಮಾನ್ಯ, ಪ್ರಗತಿಪರ ಕೃಷಿಕ ರಾಮದಾಸ ಶ್ಯಾನುಭೋಗ್ ಪಳ್ಳತ್ತಡ್ಕ, ಹಿರಿಯ ಧಾರ್ಮಿಕ ಮುಂದಾಳು ರಮಾನಾಥ ರೈ ಮೇಗಿನಕಡಾರು, ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು, ಪೆರಡಾಲ ದೇವಸ್ಥಾನದ ಮಾಜಿ ಮೊಕ್ತೇಸರ ಗಂಗಾಧರ ಗೋಳಿಯಡ್ಕ, ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಮೊಕ್ತೇಸರ ಶ್ರೀಕೃಷ್ಣ ಭಟ್ ಪುದುಕೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸೇವಾ ಕಛೇರಿ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ ರೈ ಪೆರಡಾಲ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯೆ ಜಲಜಾಕ್ಷಿ ವಂದಿಸಿದರು. ಸಾಂಸ್ಕøತಿಕ ಸಮಿತಿ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಕಾರ್ಯಕ್ರಮ ನಿರೂಪಿಸಿದರು. ನಂದನ ಶರ್ಮ ಪಂಜಿತ್ತಡ್ಕ ಪ್ರಾರ್ಥನೆ ಹಾಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries