ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದ್ದಾಗ, ಮಧ್ಯಾಹ್ನ 12:56ರ ವೇಳೆಗೆ ಮೊದಲ ಘಟನೆ ನಡೆದಿದೆ.
ತಕ್ಷಣವೇ ವೀಡಿಯೊ ಕಾನ್ಫರೆನ್ಸ್ ಕಲಾಪವನ್ನು ಸ್ಥಗಿತಗೊಳಿಸಲಾಯಿತು. ಕೆಲವೇ ನಿಮಿಷಗಳಲ್ಲಿ ಕಲಾಪವನ್ನು ಮರುಾರಂಭಿಸಲಾಯಿತು. ಆದರೆ ನಂತರ ಮತ್ತೊಮ್ಮೆ ಅಶ್ಲೀಲ ವೀಡಿಯೊ ಪ್ರಸಾರವಾಯಿತು.
ಈ ವೇಳೆ ಕನಿಷ್ಠ ಎರಡು ಪರದೆಗಳಲ್ಲಿ ಅಶ್ಲೀಲ ದೃಶ್ಯಗಳು ಕಾಣಿಸಿಕೊಂಡವು. ಬಳಿಕ ಬಳಕೆದಾರನು "ನಿಮ್ಮನ್ನು ಹ್ಯಾಕ್ ಮಾಡಲಾಗಿದೆ" ಎಂಬ ಸಂದೇಶವನ್ನೂ ಪ್ರಸಾರ ಮಾಡಿದ್ದಾನೆ.
ಮೂರನೇ ಬಾರಿ ಸಂಗೀತವನ್ನು ಪ್ರಸಾರ ಮಾಡುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಲಾಯಿತು. ಇದರಿಂದ ಮುಖ್ಯ ನ್ಯಾಯಮೂರ್ತಿಯವರು ವಿಚಾರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದರು.
ಈ ಘಟನೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರು ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದರು. ನ್ಯಾಯಾಲಯದ ಕಲಾಪಗಳ ವೀಡಿಯೊ ದಾಖಲಿಸುವುದನ್ನು ನಿಷೇಧಿಸಿದ್ದು, ಯಾರಾದರೂ ಇಂತಹ ದೃಶ್ಯಗಳನ್ನು ದಾಖಲಿಸಿ ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

