HEALTH TIPS

ಪುಣೆ ವಿಮಾನ ನಿಲ್ದಾಣ: ತಾತ್ಕಾಲಿಕ ಬಂದ್ ಆಗಿದ್ದ ರನ್‌ ವೇ ಪುನರಾರಂಭ

 ಪುಣೆ: ಇಲ್ಲಿನ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಭಾರತೀಯ ವಾಯುಪಡೆ ವಿಮಾನ ಶುಕ್ರವಾರ ರಾತ್ರಿ 'ಹಾರ್ಡ್ ಲ್ಯಾಂಡಿಂಗ್' ಮಾಡಿದ ನಂತರ ತಾತ್ಕಾಲಿಕ ಬಂದ್‌ ಆಗಿದ್ದ ರನ್‌ ವೇ ಶನಿವಾರ ಬೆಳಗ್ಗೆ ಪುನರಾರಂಭವಾಗಿದೆ.


ಎಲ್ಲಾ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಂಡ ನಂತರವೇ ಇಂದು ಬೆಳಿಗ್ಗೆಯಿಂದ ವಿಮಾನಗಳ ಆಗಮನ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ಭಾರತೀಯ ವಾಯುಪಡೆಗೆ ಸೇರಿದ ವಿಮಾನ ಲ್ಯಾಂಡಿಂಗ್‌ ಆದ ಬಳಿಕ ತಾಂತ್ರಿಕ ಕಾರಣಗಳಿಂದ ರನ್‌ ವೇಯಲ್ಲಿ ನಿಂತಿತ್ತು. ಇದರಿಂದಾಗಿ ರನ್ ವೇ ಬಂದ್ ಮಾಡಲಾಯಿತು. ರನ್ ವೇ ತೆರವುಗೊಳಿಸಲು ಮತ್ತು ಸಾಮಾನ್ಯ ಕಾರ್ಯಾಚರಣೆಯನ್ನು ಪುನರ್ ಸ್ಥಾಪಿಸಲು 5 ಗಂಟೆಗಳು ಬೇಕಾಗಬಹುದು ಎಂದು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಹೇಳಿತ್ತು.

ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರನ್ ವೇ ಕಾರ್ಯಾಚರಣೆ ಸ್ಥಗಿತಗೊಂಡಿರುವುದನ್ನು ಖಚಿತಪಡಿಸಿದ್ದರು.

ಅದೃಷ್ಟವಶಾತ್, ವಿಮಾನದ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿಯಾಗಿಲ್ಲ. ರನ್ ವೇ ಕಾರ್ಯಾಚರಣೆ ಮರು ಸ್ಥಾಪಿಸಲು 5 ಗಂಟೆಗಳು ಬೇಕಾಗಬಹುದು ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದರು.

ಇದೀಗ ವಿಮಾನ ಸಂಚಾರ ಆರಂಭಗೊಂಡಿದೆ ಎಂದು ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries