ನವದೆಹಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿಯ ನಿವಾಸದ ಮೇಲೆ ಅಸ್ಸಾಂ ಪೊಲೀಸರು ದಾಳಿ ನಡೆಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಕುಟುಂಬದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ದೆಹಲಿ ಪೊಲೀಸರ ಸಹಾಯದೊಂದಿಗೆ ಪವನ್ ಖೇರಾ ಅವರ ನಿವಾಸದ ಮೇಲೆ ದಾಳಿ ನಡೆದಿದೆ.
ಹಿಮಂತ ಅವರ ಪತ್ನಿ ಮೂರು ವಿದೇಶಿ ಪಾಸ್ಪೋರ್ಟ್ಗಳನ್ನು, ದುಬೈನಲ್ಲಿ ಆಸ್ತಿಗಳನ್ನು, ಅಮೆರಿಕದಲ್ಲಿ ಕಂಪನಿಗಳನ್ನು ಅಥವಾ ಶೆಲ್ ಕಂಪನಿಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು.
ಆದರೆ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳಿಂದ ಪಡೆದ ಸುಳ್ಳು ಮಾಹಿತಿಯನ್ನು ಪಡೆದು ಆರೋಪ ಮಾಡಲಾಗುತ್ತಿದೆ. ಇದು ಅಸ್ಸಾಂ ಚುನಾವಣೆಯ ಮೇಲೆ ಪರಿಣಾಮ ಬೀರುವ ಮತ್ತು ಶಿಕ್ಷಾರ್ಹ ಅಪರಾಧ ಎಂದು ಹಿಮಂತ ತಿರುಗೇಟು ನೀಡಿದ್ದರು.

