HEALTH TIPS

ಹೆಚ್ಚುತ್ತಿರುವ ನಷ್ಟ: ಏರ್‌ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ರಾಜೀನಾಮೆ

ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಟಾಟಾ ಸಮೂಹ ಖರೀದಿಸಿದ ಬಳಿಕ ಏರ್‌ಇಂಡಿಯಾ ವಹಿವಾಟು ನಿರೀಕ್ಷಿತ ಮಟ್ಟಕ್ಕಿಂತ ನಿಧಾನವಾಗಿ ಪ್ರಗತಿಯಾಗುತ್ತಿರುವ ಮತ್ತು ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ರಾಜೀನಾಮೆಯನ್ನು ಏರ್‌ಲೈನ್ಸ್ ಕಳೆದ ವಾರ ಅಂಗೀಕರಿಸಿದ್ದು, ಉತ್ತರಾಧಿಕಾರಿಯನ್ನು ಸಂಸ್ಥೆ ನಿಯೋಜಿಸುವವರೆಗೆ ಮತ್ತು ನೋಟಿಸ್ ಅವಧಿ ಮುಗಿಯುವವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕಳೆದ ಜೂನ್ ನಲ್ಲಿ ಅಹ್ಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ಬಗ್ಗೆ ಅಂತಿಮ ವರದಿ ಬಹಿರಂಗವಾದ ಬಳಿಕ ವಿಲ್ಸನ್ ಹೊಣೆಗಾರಿಕೆಯಿಂದ ಮುಕ್ತರಾಗುವ ಸಾಧ್ಯತೆ ಇದೆ.

ಏರ್‌ಇಂಡಿಯಾ ಸೇವೆಗೆ 2022ರ ಜುಲೈನಲ್ಲಿ ನಿಯೋಜಿತರಗಿದ್ದ ವಿಲ್ಸನ್ ಐದು ವರ್ಷಗಳ ಅಧಿಕಾರಾವಧಿ ಹೊಂದಿದ್ದರು. ಕಳೆದ ಕೆಲ ತಿಂಗಳ ಹಿಂದೆಯೇ ಏರ್‌ಇಂಡಿಯಾ ಅವರ ಉತ್ತರಾಧಿಕಾರಿಯ ಹುಡುಕಾಟ ಆರಂಭಿಸಿತ್ತು. 1953ರಲ್ಲಿ ರಾಷ್ಟ್ರೀಕರಣಗೊಂಡ ಬಳಿಕ 2022ರ ವರೆಗೂ ಏರ್‌ಇಂಡಿಯಾದ ಆರ್ಥಿಕ ಆರೋಗ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2022ರಲ್ಲಿ ಅದನ್ನು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಜತೆಗೆ ಟಾಟಾ ಸಮೂಹಕ್ಕೆ ಮಾರಾಟ ಮಾಡಲಾಗಿತ್ತು.

ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಪೂರೈಕೆ ಸರಣಿ ವ್ಯತ್ಯಯವಾದಾಗ, ಹಳೆ ವಿಮಾನಗಳ ಪರಿವರ್ತನೆ ಹಾಗೂ ಹೊಸ ವಿಮಾನಗಳ ನಿಯೋಜನೆ ವಿಳಂಬವಾಯಿತು. ಧೀರ್ಘಮಾರ್ಗಗಳ ವಾಯುಪ್ರದೇಶದ ನಿರ್ಬಂಧಗಳ ಕಾರಣದಿಂದ ವೆಚ್ಚಗಳು ಹೆಚ್ಚಿದವು. ಕಳೆದ ತಿಂಗಳು ಇಂಡಿಗೊ ಸಿಇಒ ಪೀಟರ್ ಎಂಬರ್ಸ್ ಕೂಡಾ ರಾಜೀನಾಮೆ ನೀಡಿದ್ದರು. ಇಂಡಿಗೋ ಈ ಹುದ್ದೆಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದು, ಆಗಸ್ಟ್ ನಲ್ಲಿ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಸಿಇಒ ಹುಡುಕಾಟ ಆರಂಭಿಸಿದ್ದ ಏರ್‌ಇಂಡಿಯಾ ಇನ್ನೂ ತನ್ನ ಹೊಸ ನಾಯಕನ ನಿರೀಕ್ಷೆಯಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries