ಟೆಹರಾನ್: ಅಮೆರಿಕ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದ ಬಳಿಕ ನಾಪತ್ತೆಯಾಗಿದ್ದ ಪೈಲಟ್ ಅನ್ನು ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ಮೂಲಕ ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ರಕ್ಷಣೆ ಮಾಡಿದೆ.
ಅಮೆರಿಕದ ಎಫ್-15 ಈಗಲ್ ಯುದ್ಧ ವಿಮಾನವನ್ನು ಇರಾನ್ನ ಸೇನೆ ಹೊಡೆದುರುಳಿಸಿತ್ತು.
ಇದರ ಬೆನ್ನಲ್ಲೇ ಅತ್ಯಂತ ಸಾಹಸಮಯ 'ಸರ್ಚ್ ಆಯಂಡ್ ರೆಸ್ಕ್ಯೂ ಆಪರೇಷನ್' ಕೈಗೊಳ್ಳಲಾಗಿತ್ತು.
ಅಮೆರಿಕ ತನ್ನ ಪೈಲಟ್ ಅನ್ನು ರಕ್ಷಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಇರಾನ್ನಲ್ಲಿ ಸಿಲುಕಿಕೊಂಡಿದ್ದ ತನ್ನದೇ ಆದ ಅತ್ಯಾಧುನಿಕ ವಿಮಾನಗಳನ್ನು ನಾಶಪಡಿಸಿತು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಪೈಲಟ್ ರಕ್ಷಣೆಯ ವೇಳೆ ಅಮೆರಿಕ ತನ್ನದೇ ಯುದ್ಧ ವಿಮಾನಗಳನ್ನು ಸ್ಫೋಟಿಸಿದ್ದು ಏಕೆ?
ಒಂದು ಸಾಲಿನಲ್ಲಿಅಮೆರಿಕ ತನ್ನ ಪೈಲಟ್ ರಕ್ಷಣೆಯ ಕಾರ್ಯಾಚರಣೆಯ ವೇಳೆ, ರಹಸ್ಯ ತಂತ್ರಜ್ಞಾನ ಶತ್ರುಗಳ ಕೈಗೆ ಸಿಗದಂತೆ ತಡೆಯಲು ತನ್ನದೇ ಎರಡು ಕೋಟ್ಯಂತರ ಮೌಲ್ಯದ ಯುದ್ಧ ವಿಮಾನಗಳನ್ನು ನಾಶಪಡಿಸಿತು.ಪ್ರಮುಖ ಅಂಶಗಳು• ಪೈಲಟ್ ರಕ್ಷಣಾ ಕಾರ್ಯಾಚರಣೆಇರಾನ್ ಅಮೆರಿಕದ ಎಫ್-15 ಈಗಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ, ನಾಪತ್ತೆಯಾದ ಪೈಲಟ್ ಅನ್ನು ಪತ್ತೆಹಚ್ಚಿ ರಕ್ಷಿಸಲು ಅಮೆರಿಕ ಸಾಹಸಮಯ ಕಾರ್ಯಾಚರಣೆಯನ್ನು ಕೈಗೊಂಡಿತು.• ವಿಮಾನಗಳ ಸ್ಫೋಟದ ಅಗತ್ಯರಕ್ಷಣಾ ಕಾರ್ಯಾಚರಣೆಗೆ ಬಳಸಿದ ಐದು ಸರಕು ವಿಮಾನಗಳಲ್ಲಿ ಎರಡು ಇರಾನ್ನ ಮರುಭೂಮಿಯಲ್ಲಿ ತಾಂತ್ರಿಕ ದೋಷದಿಂದಾಗಿ ಸಿಲುಕಿಕೊಂಡವು, ಅವುಗಳನ್ನು ವಾಪಸ್ ಹಾರಿಸಲು ಸಾಧ್ಯವಾಗಲಿಲ್ಲ.• ಮಿಲಿಟರಿ ರಹಸ್ಯದ ಸಂರಕ್ಷಣೆಸಿಲುಕಿಕೊಂಡ ಈ ಲಾಕ್ಹೀಡ್ ಮಾರ್ಟಿನ್ ವಿಮಾನಗಳಲ್ಲಿ ಅತ್ಯಾಧುನಿಕ ರಹಸ್ಯ ತಂತ್ರಜ್ಞಾನ ಮತ್ತು ಸಂವಹನ ವ್ಯವಸ್ಥೆಗಳಿದ್ದವು; ಇವು ಶತ್ರುಗಳ ಕೈ ಸೇರದಂತೆ ತಡೆಯಲು ಸೈನಿಕರು ಅವುಗಳನ್ನು ಸ್ಫೋಟಿಸಿದರು.• ಹಣಕ್ಕಿಂತ ಭದ್ರತೆಗೆ ಆದ್ಯತೆಅಮೆರಿಕ ತನ್ನ ಮಿಲಿಟರಿ ನಿಯಮಗಳನ್ನು ಪಾಲಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ನಷ್ಟಕ್ಕಿಂತ ದೇಶದ ಮಿಲಿಟರಿ ರಹಸ್ಯಗಳು ಮತ್ತು ಯೋಧರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿತು.• ಸೈನಿಕರ ಪಾರುಗಾಣಿಕೆ ಸಿದ್ಧಾಂತಯಾವುದೇ ಯೋಧರನ್ನು ಶತ್ರುಗಳ ವಶಕ್ಕೆ ಬಿಟ್ಟು ಬರುವಂತಿಲ್ಲ ಎಂಬ ಅಮೆರಿಕದ ದೃಢವಾದ ಮಿಲಿಟರಿ ಸಿದ್ಧಾಂತದಂತೆ ಈ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.ಪ್ರಮುಖ ಅಂಕಿಅಂಶಗಳು5ಬಳಸಿದ ಸರಕು ವಿಮಾನಗಳ ಸಂಖ್ಯೆ100 ಮಿಲಿಯನ್ ಡಾಲರ್ (₹800 ಕೋಟಿ)ಒಂದು ವಿಮಾನದ ಅಂದಾಜು ಬೆಲೆಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯ ಐದು ಸರಕು ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಈ ಪೈಕಿ ಎರಡು ವಿಮಾನಗಳು ಇರಾನ್ನಿಂದ ಹಾರಲು ಸಾಧ್ಯವಾಗಲಿಲ್ಲ. ಅವುಗಳು ಇರಾನ್ ಕೈಗೆ ಸಿಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕದ ಸೈನಿಕರೇ ಅದನ್ನು ನಾಶಪಡಿಸಿದೆ ಎದರು ವರದಿಯಾಗಿದೆ.
ಸ್ಫೋಟಗೊಂಡ ವಿಮಾನಗಳು 'ಲಾಕ್ಹೀಡ್ ಮಾರ್ಟಿನ್ C-130' (MC-130J Commando II) ಮಾದರಿ ಎಂದು ಹೇಳಲಾಗುತ್ತಿದೆ.
ನಾಶಪಡಿಸಿದ ಸರಕು ವಿಮಾನಗಳ ಬೆಲೆ ತಲಾ 100 ಮಿಲಿಯನ್ ಡಾಲ್ (ಅಂದಾಜು ₹800 ಕೋಟಿ) ಎಂದು ಹೇಳಲಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಇರಾನ್ನ ಮರುಭೂಮಿಯಲ್ಲಿ ಅಮೆರಿಕದ ಸಾರಿಗೆ ವಿಮಾನಗಳು ಇಳಿದಿದ್ದವು. ಆದರೆ ಮರುಭೂಮಿಯಲ್ಲಿ ಅಮೆರಿಕದ ವಿಮಾನಗಳು ಸಿಲುಕಿಕೊಂಡವು ಅಥವಾ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದ ಅವುಗಳನ್ನು ಮರಳಿ ಟೇಕ್-ಆಫ್ ಮಾಡಲು ಸಾಧ್ಯವಾಗಲಿಲ್ಲ.
ವಿಮಾನವನ್ನು ಸ್ಫೋಟಿಸಿದ್ದು ಏಕೆ?
ಶತ್ರುಗಳ ಕೈಗೆ ರಹಸ್ಯ ತಂತ್ರಜ್ಞಾನ ಸಿಗದಂತೆ ತಡೆಯಲು ಅಮೆರಿಕ ತನ್ನ ಕೋಟ್ಯಂತರ ರೂಪಾಯಿ ಮೌಲ್ಯದ ವಿಮಾನಗಳನ್ನು ತಾನೇ ನಾಶಪಡಿಸುವ ಮಿಲಿಟರಿ ನಿಮಯವನ್ನು ಪಾಲಿಸಿಕೊಂಡು ಬಂದಿದೆ.
ಶತ್ರು ರಾಷ್ಟ್ರವಾದ ಇರಾನ್ನ ಸೈನಿಕರು ಸಮೀಪಿಸುತ್ತಿದ್ದಂತೆ, ಅಮೆರಿಕದ ಸೈನಿಕರು ಅಲ್ಲಿಂದ ಹೊರಡುವ ಮುನ್ನ ತಮ್ಮದೇ ವಿಮಾನಗಳನ್ನು ಸ್ಫೋಟಿಸಿದರು.
ಏಕೆಂದರೆ ಆ ವಿಮಾನಗಳಲ್ಲಿ ಅತ್ಯಂತ ರಹಸ್ಯವಾದ ತಂತ್ರಜ್ಞಾನ, ಸಂವಹನ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳಿದ್ದವು. ಇವು ಇರಾನ್ ಅಥವಾ ಇತರ ಶತ್ರುಗಳ ಕೈಗೆ ಸಿಗಬಾರದು ಎಂಬುದು ಅಮೆರಿಕದ ಉದ್ದೇಶವಾಗಿತ್ತು.
ವಿಮಾನಗಳ ರಕ್ಷಣೆ ಕಠಿಣವಾಗಿದ್ದರಿಂದ ಹಾಗೂ ಸಮಯ ಕಡಿಮೆಯಾಗಿದ್ದರಿಂದ ಅಮೆರಿಕದ ಕಮಾಂಡರ್ಗಳು ವಿಮಾನಗಳನ್ನು ಸ್ಫೋಟಿಸಲು ನಿರ್ಧರಿಸಿದ್ದರು. ಹಣದ ನಷ್ಟಕ್ಕಿಂತ ಮಿಲಿಟರಿ ರಹಸ್ಯ ಮುಖ್ಯ ಎಂಬ ನೀತಿಯನ್ನು ಅನುಸರಿಸಿತು.
ಯಾವುದೇ ಯೋಧರನ್ನು ಶತ್ರುಗಳ ವಶಕ್ಕೆ ಬಿಟ್ಟು ಬರುವಂತಿಲ್ಲ ಎಂಬ ತನ್ನ ಸಿದ್ಧಾಂತವನ್ನು ಅಮೆರಿಕ ಸಾಬೀತುಪಡಿಸಿತು. ಇದು ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಕಾರ್ಯಾಚರಣೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಲಾಡೆನ್ ವಿರುದ್ಧ ಕಾರ್ಯಾಚರಣೆ...
ಉಗ್ರ ಒಸಾಮ ಬಿನ್ ಲಾಡೆನ್ ಹತ್ಯೆಯ ಸಂದರ್ಭದಲ್ಲೂ ಅಮೆರಿಕ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಲಾಡೆನ್, ಅಮೆರಿಕದ ನ್ಯೂಯಾರ್ಕ್ ನಗರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ಆಗಿದ್ದರು.

