ಟೆಹರಾನ್: ಅಮೆರಿಕದೊಂದಿಗೆ ಸಂಘರ್ಷ ಆರಂಭವಾದ ಸುಮಾರು ಎರಡು ತಿಂಗಳ ನಂತರ, ಇಂದು ಟೆಹರಾನ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಇರಾನ್ ಪುನರಾರಂಭಿಸಿದೆ.
ಟೆಹರಾನ್‌ನ ಇಮಾಮ್ ಖಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ತಾಂಬುಲ್, ಓಮನ್ ರಾಜಧಾನಿ ಮಸ್ಕತ್ ಮತ್ತು ಸೌದಿ ಅರೇಬಿಯಾದ ಮದೀನಾ ನಗರಗಳಿಗೆ ವಿಮಾನಗಳು ನಿರ್ಗಮಿಸಿವೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಶನಿವಾರ ಬೆಳಿಗ್ಗೆ ಇಸ್ತಾಂಬುಲ್‌ಗೆ ಕನಿಷ್ಠ ಮೂರು ವಿಮಾನಗಳು ಟೇಕ್ ಆಫ್ ಮಾಡಿವೆ' ಎಂದು ಫ್ಲೈಟ್‌ರಾಡಾರ್24 ತಿಳಿಸಿದೆ.
ಏತನ್ಮಧ್ಯೆ, ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು, ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿದೆ.
'ಇರಾನ್ ಮತ್ತು ಅಮೆರಿಕದ ನಡುವೆ ಯಾವುದೇ ಸಭೆ ನಿಗದಿಯಾಗಿಲ್ಲ. ನಮ್ಮ ಅಭಿಪ್ರಾಯವನ್ನು ಪಾಕಿಸ್ತಾನಕ್ಕೆ ತಿಳಿಸಲಾಗುವುದು' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೇಯ್ ತಿಳಿಸಿದ್ದಾರೆ.

