ಕಾಬೂಲ್: ಅಫ್ಗಾನಿಸ್ತಾನದ ಉತ್ತರ, ಪೂರ್ವ ಭಾಗ ಹಾಗೂ ಪಾಕಿಸ್ತಾನದ ಪಶ್ಚಿಮ ಭಾಗಗಳಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾ ಗಿದೆ. ಭೂಕಂಪದ ಕೇಂದ್ರಬಿಂದು ಅಫ್ಗಾನಿಸ್ತಾನದ ಕುಂದುಜ್ ನಗರ ದಿಂದ ಪೂರ್ವಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಕಂಡುಬಂದಿದೆ.
ಭಾರತದದೆಹಲಿ, ಜಮ್ಮು ಮತ್ತು ಕಾಶ್ಮೀರ,
ಪಂಜಾಬ್ ಮತ್ತು ಹರಿಯಾಣ ಸೇರಿ ಹಲವೆಡೆ ರಾತ್ರಿ 9.45ರ ಸುಮಾರಿಗೆ ಕೆಲ ಸೆಕೆಂಡ್ಗಳ ವರೆಗೆ ಭೂಮಿ ಕಂಪಿಸಿದೆ.

