ನವದೆಹಲಿ: ಯುದ್ಧ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 345 ಮಂದಿಯ ಭಾರತೀಯ ಮೀನುಗಾರರ ಗುಂಪು ಅರ್ಮೇನಿಯಾ ಮೂಲಕ ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೀನುಗಾರರ ವಾಪಸಾತಿಯಲ್ಲಿ ನೆರವಾಗುತ್ತಿರುವ ಅರ್ಮೇನಿಯಾದ ವಿದೇಶಾಂಗ ಸಚಿವ ಅರಾರರ್ ಯಾನ್ ಅವರಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಧನ್ಯವಾದ ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ 1,150ಕ್ಕೂ ಅಧಿಕ ಭಾರತೀಯರು ರಸ್ತೆ ಮೂಲಕ ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ಮಾರ್ಗವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.
ಇರಾನ್‌ನಲ್ಲಿ ಸಿಲುಕಿದ್ದ ಭಾರತಿಯ ಮೀನುಗಾರರ ತಂಡವು ಅರ್ಮೇನಿಯಾ ಮೂಲಕ ದೇಶಕ್ಕೆ ಹಿಂದಿರುಗಿದೆ. ಸಂಜೆ ವಿಮಾನವು ಚೆನ್ಲೈಗೆ ತಲುಪಿದೆ ಎಂದು ಪ್ರಕಟಣೆ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಅತ್ಯಂತ ಆದ್ಯತೆ ಮೇರೆಗೆ ವಿದೇಶಾಂಗ ಸಚಿವಾಲಯ ನಿಕಟ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಅಬುಧಾಭಿಯಲ್ಲಿ ಶುಕ್ರವಾರ ಐವರು ಭಾರತೀಯರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

