ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದಲ್ಲಿ ಮೇ 5 ಮತ್ತು 6 ರಂದು ನಡೆಯಲಿರುವ ವಿಶೇಷ ಮೂಡಪ್ಪ ಸೇವೆ ಹಾಗೂ ಚಂಡಿಕಾಯಾಗದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾದೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಶ್ರೀಮಠದಲ್ಲಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿ ಪೂರ್ವಕವಾಗಿ ಆಮಂತ್ರಿಸಲಾಯಿತು
ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಸೇವಾ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಭಟ್, ಸಮಾಜ ಸೇವಕರಾದ ಸುಧಾಮ ಗೋಸಾಡ,ಪತ್ರಕರ್ತ ಅಖಿಲೇಶ್ ನಗುಮುಖಂ, ಸೇವಾ ಸಮಿತಿ ಸದಸ್ಯ ಸೀತಾರಾಮ ರೈ ಪಿಂಚಾರ, ಸುಧಾಕರನ್ ಪಾಂಡಿಗದ್ದೆ ಗೋಸಾಡ ಉಪಸ್ಥಿತರಿದ್ದರು.



