ಕಾಸರಗೋಡು: ಹದಿನೇಳರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿದ ನಂತರ ತಲೆಮರೆಸಿ ಕೊಂಡಿದ್ದ "ಪೆÇೀಕ್ಸೋ" ಪ್ರಕರಣ ಆರೋಪಿ ಉಳಿಯತ್ತಡ್ಕ ಇಜ್ಜತ್ನಗರ ನಿವಾಸಿ ಬದ್ರುದ್ದೀನ್ (37) ಎಂಬಾತನನ್ನು ವಿದ್ಯಾನಗರ ಪೆÇಲೀಸರು ಎರ್ನಾಕುಳಂನಿಂದ ಬಂಧಿಸಿದ್ದಾರೆ.
ತಿಂಗಳ ಹಿಂದೆ ಚೆಟ್ಟುಂಗುಳಿಯಲ್ಲಿ 16ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ವಿದ್ಯಾನಗರ ಠಾನೆ ಪೆÇಲೀಸರು ಪೆÇೀಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದು, ನಂತರ ಆರೋಪಿ ತಲೆಮರೆಸಿಕೊಂಡಿದ್ದನು. ಆತ ಎರ್ನಾಕುಳಂನಲ್ಲಿರುವ ಬಗ್ಗೆಲಭಿಸಿದ ಮಾಹಿತಿಯನ್ವಯ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ವಿನೇಶ್ ಕುಮಾರ್ ನಿರ್ದೇಶನದಂತೆ ಎಸ್ಐ ಸಫಾನ್, ಸೀನಿಯರ್ ಸಿವಿಲ್ ಪೆÇಲೀಸ್ ಆಫೀಸರ್ ವಾಹೀದ್, ಸಿವಿಲ್ ಪೆÇಲೀಸ್ ಆಫೀಸರ್ಗಳಾದ ಸಜೀಶ್, ಉಣ್ಣಿಕೃಷ್ಣನ್ ಮತ್ತು ಸನೀಶ್ ಜೋಸೆಫ್ ಅವರನ್ನೊಳಗೊಂಡ ಪೋಲೀಸರ ತಂಡ ಆರೋಪಿಯನ್ನು ಎರ್ನಾಕುಳಂನಿಂದ ಬಂಧಿಸಿದೆ.

