ಬದಿಯಡ್ಕ: ಬಾರಡ್ಕ ಕನಕಪಾಡಿ ನಿವಾಸಿ ದಿ. ಬೆನ್ನಿ ಡಿ.ಸೋಜಾ ಮತ್ತು ಲೂಸಿ ದಂಪತಿ ಪುತ್ರ ಹೆನ್ರಿ ಡಿ.ಸೋಜಾ (58)ದುಬೈನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಹಿಂದೆ ಕಾಸರಗೋಡು-ಬೆಳಿಂಜ ಸಹಿತ ವಿವಿದ ರೂಟುಗಳಲ್ಲಿನ ಖಾಸಗಿ ಬಸ್ ಚಾಲಕರಾಗಿ ದುಡಿಯುತ್ತಿದ್ದ ಇವರು ನಂತರ ದುಬೈ ತೆರಳಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.
ಸೋಮವಾರ ಬೆಳಗ್ಗೆ ತಮ್ಮ ವಾಸಸ್ಥಳದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಇವರು ಕಳೆದ ಮೂರು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ವಾಸಿಸುತ್ತಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


