HEALTH TIPS

ಸೌಹಾರ್ದತೆಗೆ ಸಾಕ್ಷಿ : ಉದ್ಯಾವರ ಜಮಾಯತ್ ಗೆ ಭೇಟಿ ನೀಡಿದ ಶ್ರೀ ಅರಸು ದೈವ ಪಾತ್ರಿಗಳು

ಮಂಜೇಶ್ವರ: ತುಳುನಾಡಿನ ಸಾಂಸ್ಕøತಿಕ ಪರಂಪರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಮತ್ತು ಸೌಹಾರ್ದತೆಯೊಂದಿಗೆ ನೆರವೇರಿದವು. ಪ್ರಾಚೀನ ಕಾಲದಿಂದಲೂ ನಡೆದು ಬರುತ್ತಿರುವ ಪದ್ಧತಿಯಂತೆ ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆಹ್ವಾನಿಸಿದರು. 


ಮೇಷ ಸಂಕ್ರಮಣ ಮುಗಿದು ಬರುವ ಮೊದಲ ಶುಕ್ರವಾರದಂದು ದೈವಗಳು ಮಸೀದಿಗೆ ಭೇಟಿ ನೀಡುವುದು ಶತಮಾನಗಳ ಹಳೆಯ ವಾಡಿಕೆ. ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವ ಪಾತ್ರಿಗಳಿಗೆ ಮಸೀದಿಯ ಆಡಳಿತ ಸಮಿತಿ, ಶಾಸಕರು ಹಾಗೂ ಮುಸ್ಲಿಂ ಬಾಂಧವರು ಸ್ವಾಗತ ನೀಡಿದರು. ಆಮಂತ್ರಣ ನೀಡುವುದಷ್ಟೇ ಅಲ್ಲದೆ, ಜಾತ್ರೆಯ ನೇಮೋತ್ಸವದ ದಿನದಂದು ಮಸೀದಿಯ ಪದಾಧಿಕಾರಿಗಳಿಗೆ ದೈವಸ್ಥಾನದಲ್ಲಿ ವಿಶೇಷ ಗೌರವ ಮೀಸಲಿಡಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ದೈವಗಳು ಆಶೀರ್ವದಿಸಿ ನೀಡುವ ಪ್ರಸಾದವನ್ನು (ಹೂವು) ಜಮಾಯತ್ ನವರಿಗೆ ನೀಡುವ ಮೂಲಕ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ.

ಮೇ 9 ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ದೊರಕಲಿದ್ದು, 11 ಮತ್ತು 12 ರಂದು ವಾರ್ಷಿಕ ಬಂಡಿ ಉತ್ಸವದೊಂದಿಗೆ ಜಾತ್ರೋತ್ಸವ ನಡೆಯಲಿದೆ.

ಕಿರಣ್ ಶೆಟ್ಟಿ, ಸಂಜೀವ ಶೆಟ್ಟಿ, ಉಮೇಶ್ ಪೂಮಣ್ಣು, ತಿಮ್ಮ ಭಂಡಾರಿ, ಕುಂಞಣ್ಣ ಚೌಟ, ಮಂಜ ರೈ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಭಾಗಿಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries