ಕಾಸರಗೋಡು: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಬಾಲಕೋಟ್ ಮತ್ತು ಆಪರೇಷನ್ ಸಿಂಧೂರ್ ವಿಷಯ ಎತ್ತಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ರಕ್ಷಣಾ ವ್ಯವಸ್ಥೆಯನ್ನು ಅಪಹಾಸ್ಯಗೈದಿರುವ ಪ್ರತಿಪಕ್ಷ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಖಂಡನೀಯ ಹಾಗೂ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ಎಲ್.ಅಶ್ವಿನಿ ಆಗ್ರಹಿಸಿದ್ದಾರೆ.
ಪ್ರತಿಪಕ್ಷ ಮುಖಂಡ ಮತ್ತು ಕಾಂಗ್ರೆಸ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯು ಅತ್ಯಂತ ಗಂಭೀರ, ಖಂಡನೀಯ ಮತ್ತು ಭಾರತೀಯ ಸೇನೆ, ನಮ್ಮ ದೇಶ ಮತ್ತು ಪ್ರಧಾನಿ ಹುದ್ದೆಗೆ ಎಸಗಿದ ಅಪಮಾಣವಾಗಿದೆ. ಹಿರಿಯ ಕಾಂಗ್ರೆಸ್ ನಾಯಕರ ಹೇಳಿಕೆಗಳು ಯಾವಾಗಲೂ ಭಾರತದ ಮೇಲೆ ದಾಳಿ ಮಾಡುವ ಭಯೋತ್ಪಾದಕರನ್ನು ಬೆಂಬಲಿಸುತ್ತವೆ. ಕಾಶ್ಮೀರದಲ್ಲಿ ಅಮಾಯಕ ಮತ್ತು ನಿರಾಯುಧ ಭಾರತೀಯರ ಮೇಲೆ ನಿರ್ದಯವಾಗಿ ಗುಂಡು ಹಾರಿಸಿದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ದೇಶದ ಅನೇಕ ಮಹಿಳೆಯರಿಂದ ಕೆಂಪು ಬಣ್ಣವನ್ನು ತೆಗೆದು ವಿಧವೆಯನ್ನಾಗಿ ಮಾಡಿದವರ ವಿರುದ್ಧ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ಅನ್ನು ಮ್ಯಾಜಿಕ್ ಎಂದು ಉಲ್ಲೇಖಿಸುವುದು ರಾಹುಲ್ ಗಾಂಧಿಯವರ ಮಹಿಳಾ ವಿರೋಧಿ ಮತ್ತು ಭಾರತ ವಿರೋಧಿ ನಿಲುವನ್ನು ಬಹಿರಂಗಪಡಿಸುತ್ತದೆ ಎಂದು ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.



