ಪ್ರಾತಃಕಾಲ 6 ರಿಂದ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಚತುಃಶುದ್ಧಿ, ಧಾರಾ ಅವಗಾಹ, ಪಂಚಕ, ಅಂಕುರ ಪೂಜೆ ನಡೆಯಲಿದೆ.
ನಟರಾಜ ವೇದಿಕೆಯಲ್ಲಿ :
ಪೂರ್ವಾಹ್ನ 9.30ಕ್ಕೆ ನಂದಿತಾ ಪೈ ಮತ್ತು ಬಳಗ ಮಂಗಳೂರು ಇವರಿಂದ ಹಿಂದೂಸ್ಥಾನಿ ಸಂಗೀತ ಮತ್ತು ಭಜನ್, 12.30 ರಿಂದ ನೃತ್ಯ ಕಾರ್ಯಕ್ರಮ, 1 ರಿಂದ ಭಕ್ತಿ ತರಂಗಿಣಿ, ಮಧ್ಯಾಹ್ನ 2 ರಿಂದ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ. ಸಂಜೆ 4ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಗಣ್ಯರು ಉಪಸ್ಥಿತರಿರುವರು. ಸಂಜೆ 7ಕ್ಕೆ ಪ್ರಸಿದ್ಧ ಗಾಯಕ ರಾಹುಲ್ ವೆಳ್ಳಾಲ್ ಮತ್ತು ಬಳಗ ಬೆಂಗಳೂರು ಇವರಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ, 9 ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮಿ ಕೆ., ನಾಟ್ಯವಿದ್ಯಾಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯಸಂಭ್ರಮ ಜರಗಲಿದೆ.
ಕೈಲಾಸ ವೇದಿಕೆಯಲ್ಲಿ :
ಬೆಳಗ್ಗೆ 10ಕ್ಕೆ ಶಾಸ್ತ್ರೀಯ ಸಂಗೀತ, 11.30 ರಿಂದ ಶಾಸ್ತ್ರೀಯ ಸಂಗೀತ, 1ಕ್ಕೆ ತಾಳಮದ್ದಳೆ, 3.30ಕ್ಕೆ ಮಿಮಿಕ್ರಿ, 4 ರಿಂದ ಹರಿಕಥಾ ಸತ್ಸಂಗ, 5 ರಿಂದ ಜಾನಪದ ನೃತ್ಯ, 5.30 ರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

