HEALTH TIPS

ಟ್ರಂಪ್ ಆರೋಗ್ಯದ ಕುರಿತು ವದಂತಿಗಳ ಮಹಾಪೂರ; 'ಲಿಬರಲ್‌ ಗಳ ಪಿತೂರಿ' ಎಂದು ಆರೋಪಿಸಿದ ಶ್ವೇತಭವನ

 ವಾಷಿಂಗ್ಟನ್5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ರವಿವಾರ ವದಂತಿಗಳು ಕೇಳಿಬಂದಿದೆ ಈ ಹಿನ್ನೆಲೆಯಲ್ಲಿ 'ಲಿಬರಲ್‌ ಗಳ ಪಿತೂರಿ' ಕಾರಣ ಎಂದು ಶ್ವೇತಭವನ ಆರೋಪಿಸಿದೆ.


ಸಾಮಾಜಿಕ ಜಾಲತಾಣಗಳಲ್ಲಿ 'ಟ್ರಂಪ್ ಮೃತಪಟ್ಟಿದ್ದಾರೆ' ಎಂಬ ಪೋಸ್ಟ್‌ ಗಳು ಟ್ರೆಂಡ್ ಆಗಿದ್ದವು.

ಎಕ್ಸ್ ವೇದಿಕೆಯಲ್ಲಿ ಟ್ರಂಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ದೃಢಪಡದ ಮಾಹಿತಿಗಳು ವ್ಯಾಪಕವಾಗಿ ವೈರಲ್ ಆಗಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

"ಟ್ರಂಪ್ ಅವರನ್ನು ವಾಲ್ಟರ್ ರೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ವರದಿಗಳು, ಊಹಾಪೋಹಗಳು ಹಾಗೂ ದೃಢಪಡದ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂತು. ಇಂದು ಅವರು ಸಾರ್ವಜನಿಕರ ಮುಂದೆ ಹಾಜರಾಗುವುದಿಲ್ಲ" ಎಂದು ಹೇಳಿದ ಪೋಸ್ಟ್‌ ಒಂದು ವೈರಲ್ ಆಗಿತ್ತು. ಈ ಖಾತೆಯ ಬಳಕೆದಾರರು ತಮ್ಮನ್ನು ವಿಜ್ಞಾನಿ, ವೈದ್ಯಕೀಯ ತಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎಂದು ಪರಿಚಯಿಸಿಕೊಂಡಿದ್ದರು.

ಟ್ರಂಪ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ವದಂತಿಗಳು ಇನ್ನಷ್ಟು ವೇಗ ಪಡೆದವು.

ವಾರಾಂತ್ಯಗಳಲ್ಲಿ ಟ್ರಂಪ್ ಫ್ಲೋರಿಡಾದ ಮಾರ್-ಅ-ಲಾಗೊ ಎಸ್ಟೇಟ್‌ಗೆ ತೆರಳಿ ಗಾಲ್ಫ್ ಆಡುವುದು ಸಾಮಾನ್ಯವಾಗಿರುವುದರಿಂದ, ಅವರ ಗೈರುಹಾಜರಾತಿ ಕುರಿತ ಊಹಾಪೋಹಗಳು ಮತ್ತಷ್ಟು ಹೆಚ್ಚಾದವು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries