HEALTH TIPS

ಶಬರಿಮಲೆ ದೇವಸ್ಥಾನದ ಮೇಲೆ ಹಾರಿದ ಹೆಲಿಕಾಪ್ಟರ್: ದೃಶ್ಯ ಸೆರೆಹಿಡಿದು ಮರಳಿರುವ ಬಗ್ಗೆ ಶಂಕೆ: ವರದಿ ಕೋರಿದ ವಿಶೇಷ ಆಯುಕ್ತರು

ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ಮೇಲೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹಾರಿರುವುದು ವಿಚಾರಣೆಗೆ ಆದೇಶಿಸಲಾಗಿದೆ. ಹೈಕೋರ್ಟ್ ನೇಮಿಸಿದ ವಿಶೇಷ ಆಯುಕ್ತ ಆರ್. ಜಯಕೃಷ್ಣನ್ ಅವರು, ಘಟನೆಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಬರಿಮಲೆ ಭದ್ರತಾ ಅಧಿಕಾರಿ ಎಸ್. ಶ್ರೀಜಿತ್ ಅವರಿಗೆ ನಿರ್ದೇಶನ ನೀಡಿದ್ದಾರೆ.


ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್, ಸಿಜಿ-821, ಸನ್ನಿಧಾನದ ಮೇಲೆ ಕೆಳ ಮಟ್ಟದಲ್ಲಿ ಹಾರಿತ್ತು. ಅದು ಧ್ವಜಸ್ತಂಭದಿಂದ ಸುಮಾರು ಐದು ಮೀಟರ್ ಎತ್ತರದಲ್ಲಿ ಹಾರಿತ್ತು. ನಾಲ್ಕು ಮಂದಿ ಹೆಲಿಕಾಪ್ಟರ್‍ನಲ್ಲಿದ್ದರು. ಹೆಲಿಕಾಪ್ಟರ್‍ನಲ್ಲಿದ್ದ ವ್ಯಕ್ತಿ ದೇವಾಲಯದ ದೃಶ್ಯಗಳನ್ನು ಚಿತ್ರೀಕರಿಸಿದರು. ಅದು ಸನ್ನಿಧಾನದ ಮೇಲೆ ಸುಮಾರು 30 ಸೆಕೆಂಡುಗಳ ಕಾಲ ಹಾರಿತು.

ಸನ್ನಿಧಾನದ ದೇವಸ್ಥಾನದ ಹತ್ತಿರ ಹೆಲಿಕಾಪ್ಟರ್ ಹಾರಿದ್ದು ಇದೇ ಮೊದಲು. ಶಬರಿಮಲೆ ದೇವಸ್ಥಾನ ಮತ್ತು ನೀಲಕ್ಕಲ್‍ವರೆಗಿನ ಪ್ರದೇಶಗಳು ಹೆಚ್ಚಿನ ಭದ್ರತಾ ವಲಯವಾಗಿದೆ. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಏಕೆ ಬಂದಿತು ಎಂಬುದನ್ನು ಪತ್ತೆ ಮಾಡಬೇಕಿದೆ. ಕೊಚ್ಚಿಯಲ್ಲಿರುವ ರಕ್ಷಣಾ ಇಲಾಖೆಯ ಪಿ.ಆರ್.ಒ. ವಿವಿಧ ಸ್ಥಳಗಳಲ್ಲಿ ಕಣ್ಗಾವಲು ವಿಮಾನಗಳ£ಹಾರಿಸಲಾಗುತ್ತಿದ್ದು, ಅದರ ಭಾಗವಾಗಿ ಹೆಲಿಕಾಪ್ಟರ್ ಹಾರಿದೆ ಎಂದು ಮಾಹಿತಿ ನೀಡಿದ್ದಾರೆನ್ನಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries