HEALTH TIPS

ಅಮೆರಿಕ| ಭೋಜನ ಕೂಟದಲ್ಲಿ ಗುಂಡಿನ ದಾಳಿ: ಕ್ಯಾಲಿಫೋರ್ನಿಯಾದ ಕೋಲ್ ತೋಮಸ್ ಅಲೆನ್ ಶಂಕಿತ ಆರೋಪಿ

 ವಾಷಿಂಗ್ಟನ್ : ಶ್ವೇತಭವನ ವರದಿಗಾರರ ಸಂಘದ ವಾರ್ಷಿಕ ಭೋಜನಕೂಟದ ವೇಳೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ಗುರುತಿಸಿವೆ. ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಹೆಸರು ಪ್ರಕಟಿಸದಿದ್ದರೂ, ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಬಿಎಸ್ ನ್ಯೂಸ್ ಅನಾಮಧೇಯ ಕಾನೂನು ಜಾರಿ ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿವೆ.


ಕ್ಯಾಲಿಫೋರ್ನಿಯಾದ ಟೊರೆನ್ಸ್ ಮೂಲದ ಅಲೆನ್, ಕಾರ್ಯಕ್ರಮಕ್ಕೂ ಮೊದಲು ವಾಷಿಂಗ್ಟನ್‌ ನ ಹಿಲ್ಟನ್ ಹೋಟೆಲ್‌ ನಲ್ಲಿ ಕೊಠಡಿ ಪಡೆದಿದ್ದನು. ಹೋಟೆಲ್ ದಾಖಲೆಗಳ ಆಧಾರದ ಮೇಲೆ ಅವನ ಗುರುತು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಯ ವೇಳೆ ಅಲೆನ್ ಭದ್ರತಾ ವಲಯವನ್ನು ಮೀರಿ ಭೋಜನ ನಡೆಯುತ್ತಿದ್ದ ಬಾಲ್‌ ರೂಮ್ ಕಡೆಗೆ ಧಾವಿಸಿದ್ದಾನೆ. ಈ ಸಂದರ್ಭದಲ್ಲಿ ಗುಂಡು ಹಾರಿಸಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವನ ಕೈಯಲ್ಲಿ ಬಂದೂಕು ಇತ್ತು ಎಂದು ತಿಳಿಸಿದ್ದಾರೆ.

ಈ ಘಟನೆ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೇದಿಕೆಯಿಂದ ತಕ್ಷಣ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಗುಂಡು ನಿರೋಧಕ ಜಾಕೆಟ್ ಧರಿಸಿದ್ದ ಒಬ್ಬ ಅಧಿಕಾರಿಗೆ ಗುಂಡು ತಗುಲಿದರೂ, ಅವರ ಸ್ಥಿತಿ ಸ್ಥಿರವಾಗಿದೆ.

ಬಂಧನದ ಬಳಿಕ ಶಂಕಿತನನ್ನು ಪರಿಶೀಲನೆಗಾಗಿ ವಿವಸ್ತ್ರಗೊಳಿಸಲಾಯಿತು. ಅವನ ಬಳಿ ಸ್ಫೋಟಕ ಸಾಧನಗಳಿಲ್ಲವೆಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಆರೋಪಿಯನ್ನು "ಭಯಾನಕ ವ್ಯಕ್ತಿ" ಎಂದು ಹೇಳಿದರು. ಇಂತಹ ಘಟನೆಗಳು ದೇಶದ ಸಾಮಾನ್ಯ ಜೀವನವನ್ನು ಬದಲಾಯಿಸಲು ಅವಕಾಶ ನೀಡುವುದಿಲ್ಲ ಎಂದರು.

ಕಾನೂನು ಜಾರಿ ಮೂಲಗಳ ಪ್ರಕಾರ, ಅಲೆನ್ ಬಳಿಯಲ್ಲಿ ಶಾಟ್‌ಗನ್, ಹ್ಯಾಂಡ್‌ಗನ್ ಹಾಗೂ ಹಲವು ಚಾಕುಗಳು ಪತ್ತೆಯಾಗಿವೆ. ಆರೋಪಿಯ ವಿರುದ್ಧ ಬಂದೂಕು ಬಳಸಿ ಹಿಂಸಾತ್ಮಕ ಕೃತ್ಯ ಎಸಗಿದ ಆರೋಪ ಹಾಗೂ ಅಪಾಯಕಾರಿ ಆಯುಧದಿಂದ ಫೆಡರಲ್ ಅಧಿಕಾರಿಯ ಮೇಲೆ ದಾಳಿ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಕೊಲಂಬಿಯಾ ಜಿಲ್ಲೆಯ ಯುಎಸ್ ಅಟಾರ್ನಿ ಜೀನೈನ್ ಪಿರೋ ತಿಳಿಸಿದ್ದಾರೆ.

"ಈ ವ್ಯಕ್ತಿಯು ಹೆಚ್ಚಿನ ಹಾನಿ ಉಂಟುಮಾಡುವ ಉದ್ದೇಶ ಹೊಂದಿದ್ದನು. ಹೋಟೆಲ್ ಹೊರಗಿನ ಭದ್ರತಾ ತಪಾಸಣೆ ವ್ಯವಸ್ಥೆಯಿಂದ ದೊಡ್ಡ ಅನಾಹುತ ತಪ್ಪಿದೆ," ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ದಾಳಿಯ ಉದ್ದೇಶವನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಯಾವುದೇ ಪಕ್ಷದ ಪರವಾಗಿಯೂ ನೋಂದಾಯಿಸದ ಮತದಾರನಾಗಿದ್ದ ಅಲೆನ್, 2017ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್)ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries