ಕೇರಳ ಮಾದರಿಯನ್ನು ರಾಷ್ಟ್ರವ್ಯಾಪಿ ಅನುಸರಿಸುವಂತೆ ಅದು ನಿರ್ದೇಶಿಸಿದೆ.
2025ರಲ್ಲಿ ಭಾರತದಾದ್ಯಂತ 11 ಕಸ್ಟಡಿ ಸಾವು ವರದಿಯಾದ ಹಿನ್ನೆಲೆಯಲ್ಲಿ ದಾಖಲಿಸಲಾಗಿರುವ ಸ್ವಯಂ ಪ್ರೇರಿತ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
ಈ ಸಂದರ್ಭ ಅದು ಕೇರಳಂನ ಹಿರಿಯ ಅಧಿಕಾರಿಗಳು ಮೀಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದಲ್ಲಿ ಪೊಲೀಸ್ ಠಾಣೆಯ ದೃಶ್ಯಗಳನ್ನು ಗಮನಿಸಬಹುದು ಎಂಬುದನ್ನು ಗಮನಿಸಿತು.
ಈ ವಿಚಾರವನ್ನು ಆಯಮಿಕಸ್ ಕ್ಯೂರಿ ಸಿದ್ಧಾರ್ಥ್ ದವೆ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕೇರಳಂ ಜೊತೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನವನ್ನು ಕೂಡ ಪೀಠ ಪ್ರಶಂಸಿಸಿತು.

