HEALTH TIPS

ಡ್ರೋನ್‌ಗಳಲ್ಲಿ ಶಸ್ತ್ರಾಸ್ತ್ರ ಸಾಗಣೆ: ತನಿಖೆ ಆರಂಭ

ನವದೆಹಲಿ (ಪಿಟಿಐ): ಭಾರತ-ಪಾಕಿಸ್ತಾನದ ಗಡಿಯುದ್ಧಕ್ಕೂ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಕಳ್ಳಸಾಗಣೆಯ ಮೂಲಕ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವ ದೊಡ್ಡ ಮಟ್ಟದ ಪಿತೂರಿ ಯನ್ನು ರೂಪಿಸಲಾಗಿದೆ ಎಂದು ಶಂಕಿಸಲಾಗಿದೆ.

ಮೂಲತಃ ಈ ಪ್ರಕರಣವನ್ನು ಫೆಬ್ರವರಿಯಲ್ಲಿ ಪಂಜಾಬ್ ಪೊಲೀಸರು ದಾಖಲಿಸಿದ್ದರು.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಜಸ್ವೀರ್ ಚೌಧರಿ, ಆತನ ಭಾರತೀಯ ಸಹಚರ ಶುಭಂ ಕುಮಾರ್ ಮತ್ತು ಇತರ ಶಂಕಿತ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಸ್ವೀರ್ ನಿರ್ದೇಶನದ ಮೇರೆಗೆ ಆತನ ಭಾರತೀಯ ಸಹಚರರು ಪಂಜಾಬ್‌, ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಸ್ಫೋಟಗಳನ್ನು ನಡೆಸುವ ಉದ್ದೇಶದಿಂದ ಭಾರತ-ಪಾಕಿಸ್ತಾನ ಗಡಿಯಾದ್ಯಂತ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಹಾಕಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅಮೃತಸರದ ರಾಜ್ಯ ವಿಶೇಷ ಕಾರ್ಯಚರಣೆ ಸೆಲ್ (ಎಸ್‌ಎಸ್‌ಒಸಿ) ಪಡೆದುಕೊಂಡಿತ್ತು. ಈ ಸಂಬಂಧ ರಾಜ್ಯ ಪೊಲೀಸರು ಫೆಬ್ರುವರಿ 10ರಂದು ಎಫ್‌ಐಆರ್‌ ದಾಖಲಿಸಿದ್ದ‌ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries