ಸ್ಪರ್ಧಾ ಕಾಯ್ದೆಯ ಕಲಂ 3 ಮತ್ತು 4ರ ನಿಬಂಧನೆಗಳನ್ನು ಉಲ್ಲಂಘಿಸಿದ ಯಾವುದೇ ಪ್ರಾಥಮಿಕ ಪುರಾವೆಗಳು ಕಂಡುಬಂದಿಲ್ಲ. ಆದ್ದರಿಂದ ಕಾಯ್ದೆಯ ಕಲಂ 26(2)ರಡಿ ಪ್ರಕರಣವನ್ನು ತಕ್ಷಣವೇ ಮುಕ್ತಾಯಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಿಸಿಐ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯದ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪವನ್ನೂ ಅದು ತಿರಸ್ಕರಿಸಿದೆ.
ಭಾರತದಲ್ಲಿ ಕಲ್ಲಿದ್ದಲು, ಸೌರ, ಜಲ, ಗಾಳಿ ಮತ್ತು ಪರಮಾಣು ಶಕ್ತಿಯಂತಹ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳೆರಡೂ ಕಾರ್ಯನಿರ್ವಹಿಸುತ್ತಿವೆ. ಸೌರ ವಿದ್ಯುತ್ತನ್ನು ಪ್ರತ್ಯೇಕ ಮಾರುಕಟ್ಟೆ ಎಂದು ಪರಿಗಣಿಸಲು ದೂರುದಾರರು ಯಾವುದೇ ಪುರಾವೆ ಒದಗಿಸಿಲ್ಲ ಎಂದು ಅದು ಹೇಳಿದೆ.
ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ವಿವಿಧ ಪ್ರಮುಖ ಕಂಪನಿಗಳು ಸಕ್ರಿಯವಾಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಪ್ರಾಬಲ್ಯ ಹೊಂದಿಲ್ಲ ಎಂದು ಸಿಸಿಐ ಅಭಿಪ್ರಾಯಿಸಿದೆ. ಇದು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದು ಅದು ಹೇಳಿದೆ.
ಟೆಂಡರ್‌ನಲ್ಲಿ ನಿಗದಿಗೊಳಿಸಲಾದ ಅರ್ಹತಾ ಮಾನದಂಡಗಳನ್ನು ದೊಡ್ಡ ಕಂಪನಿಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂಬ ಆರೋಪವನ್ನೂ ಸಿಸಿಐ ತಿರಸ್ಕರಿಸಿದೆ.

