HEALTH TIPS

ಎಪ್ಸ್ಟೀನ್ ಜಾಲದ ಕುರಿತು ತನಿಖೆ | ಫ್ರಾನ್ಸ್‌ನಲ್ಲಿ ಮತ್ತೆ 10 ಮಂದಿ ಶಂಕಿತ ಸಂತ್ರಸ್ತರ ಹೆಸರು ಬಹಿರಂಗ

 ಪ್ಯಾರಿಸ್‌: ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಮತ್ತೆ 10 ಮಂದಿ ಶಂಕಿತ ಸಂತ್ರಸ್ತರ ಹೆಸರುಗಳು ಬೆಳಕಿಗೆ ಬಂದಿವೆ ಎಂದು ಪ್ಯಾರಿಸ್‌ನ ಉನ್ನತ ಪ್ರಾಸಿಕ್ಯೂಟರ್ ಲಾರೆ ಬೆಕುವಾ ರವಿವಾರ ತಿಳಿಸಿದ್ದಾರೆ. 


ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗಳಿಗೆ ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿದ್ದ ಜೆಫ್ರಿ ಎಪ್ಸ್ಟೀನ್‌ 2019ರಲ್ಲಿ ಜೈಲಿನಲ್ಲಿದ್ದಾಗ ಮೃತಪಟ್ಟಿದ್ದ. ಬಳಿಕ ಅಮೆರಿಕದ ನ್ಯಾಯಾಂಗ ಇಲಾಖೆ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆಗೊಳಿಸಿದ ನಂತರ, ಫ್ರಾನ್ಸ್ ಸರ್ಕಾರ ಮಾನವ ಕಳ್ಳಸಾಗಣೆ ಹಾಗೂ ಸಂಬಂಧಿತ ಅಪರಾಧಗಳ ತನಿಖೆಗೆ ಆದೇಶಿಸಿತ್ತು.

ಜೆಫ್ರಿ ಎಪ್ಸ್ಟೀನ್‌ ಫ್ರಾನ್ಸ್‌ನಲ್ಲಿ ನಡೆಸಿರಬಹುದಾದ ಅಪರಾಧ ಕೃತ್ಯಗಳು ಅಥವಾ ಆತನ ಅಪರಾಧ ಜಾಲಕ್ಕೆ ನೆರವು ನೀಡಿರುವ ಸಾಧ್ಯತೆಯಿರುವ ಫ್ರೆಂಚ್ ನಾಗರಿಕರ ಪಾತ್ರದ ಕುರಿತೂ ತನಿಖೆ ನಡೆಸುವಂತೆ ಫ್ರೆಂಚ್ ಮ್ಯಾಜಿಸ್ಟ್ರೇಟ್‌ಗಳು ಸೂಚಿಸಿದ್ದರು.

'ಜೆಫ್ರಿ ಎಪ್ಸ್ಟೀನ್‌ ಜಾಲದ ಸಂತ್ರಸ್ತರು ಮುಂದೆ ಬಂದು ಮಾತನಾಡಬೇಕು ಎಂದು ಫೆಬ್ರವರಿಯಲ್ಲಿ ನಾನು ಮನವಿ ಮಾಡಿದ್ದೆ. ಅದರ ಬಳಿಕ ಸುಮಾರು 20 ಮಂದಿ ತಮ್ಮ ಗುರುತನ್ನು ಬಹಿರಂಗಪಡಿಸಿದ್ದಾರೆ' ಎಂದು ಲಾರೆ ಬೆಕುವಾ ಖಖಿಐ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಈಗಾಗಲೇ ಕೆಲವರ ಹೆಸರುಗಳು ತನಿಖಾಧಿಕಾರಿಗಳ ಗಮನದಲ್ಲಿದ್ದವು ಎಂದೂ ಅವರು ಹೇಳಿದ್ದಾರೆ.

2008ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯನ್ನು ವೇಶ್ಯಾವಾಟಿಕೆಗೆ ಪೂರೈಸಿದ್ದ ಪ್ರಕರಣದಲ್ಲಿ ಜೆಫ್ರಿ ಎಪ್ಸ್ಟೀನ್‌ ತಪ್ಪೊಪ್ಪಿಕೊಂಡಿದ್ದ. ಆ ಪ್ರಕರಣದಲ್ಲಿ ಆತ 13 ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಬಳಿಕ ಬಿಡುಗಡೆಗೊಂಡಿದ್ದ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries