HEALTH TIPS

ಅಂಡರ್‌-19 ತಂಡದಲ್ಲಿ ಕೊಹ್ಲಿ ಜೊತೆ ಆಡಿದ್ದ ಅಮನ್‌ಪ್ರೀತ್ ಗಿಲ್ ನಿಧನ

ನವದೆಹಲಿ: ಭಾರತದ ಅಂಡರ್‌-19 ತಂಡದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ ನ ಮಾಜಿ ಮಧ್ಯಮ ವೇಗಿ ಅಮನ್‌ಪ್ರೀತ್ ಸಿಂಗ್ ಗಿಲ್ ಅವರು ಬುಧವಾರ ಚಂಡೀಗಢದಲ್ಲಿ 36ನೇ ವಯಸ್ಸಿನಲ್ಲಿ ನಿಧನರಾದರು.

ವಿರಾಟ್ ಕೊಹ್ಲಿ ಜೊತೆ ಅಂಡರ್‌-19 ತಂಡದಲ್ಲಿ ಆಡಿದ್ದ ಗಿಲ್, ಪಂಜಾಬ್ ಪರ ಆರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದು 11 ವಿಕೆಟ್ ಪಡೆದಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ ನ ಮೊದಲ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಭಾಗವಾಗಿದ್ದ ಅವರು, ಬಳಿಕ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಹಿರಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

'ಅಮನ್‌ಪ್ರೀತ್ ಸಿಂಗ್ ಗಿಲ್ ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬದವರಿಗೆ ಮತ್ತು ಆತ್ಮೀಯರಿಗೆ ಸಾಂತ್ವನಗಳು' ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ 'ಎಕ್ಸ್‌'ನಲ್ಲಿ ಪ್ರಕಟಿಸಿದೆ.

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ಸಂತಾಪ ಸೂಚಿಸಿದ್ದಾರೆ.

'ಅಮನ್‌ಪ್ರೀತ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ಆರಂಭಿಕ ದಿನಗಳಲ್ಲಿ ನಾವು ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೆವು. ಅವರು ಶಾಂತ ಸ್ವಭಾವದ ಕ್ರಿಕೆಟಿಗರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಯುವರಾಜ್ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

ಗಿಲ್ ಅವರು 2007ರಲ್ಲಿ ಭಾರತ ಪರ ಐದು ಯೂತ್ ಏಕದಿನ ಹಾಗೂ ಒಂದು ಯೂತ್ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಶ್ರೀಲಂಕಾದ ಮಾಜಿ ಆಲ್‌ರೌಂಡರ್ ತಿಸಾರ ಪೆರೆರಾ ಅವರ ವಿಕೆಟ್ ಕೂಡ ಪಡೆದಿದ್ದರು.

ಆದರೆ, 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ವಿಶ್ವಕಪ್ ವಿಜೇತ ಭಾರತ ಅಂಡರ್‌-19 ತಂಡದಲ್ಲಿ ಅವರಿಗೆ ಸ್ಥಾನ ದೊರಕಿರಲಿಲ್ಲ.

'ಪಂಜಾಬ್ ಅನ್ನು ಪ್ರತಿನಿಧಿಸಿದ್ದ ಹಾಗೂ ಪಂಜಾಬ್ ಕಿಂಗ್ಸ್ ಕುಟುಂಬದ ಭಾಗವಾಗಿದ್ದ ಅಮನ್‌ಪ್ರೀತ್ ಸಿಂಗ್ ಅವರ ನಿಧನದಿಂದ ದುಃಖವಾಗಿದೆ' ಎಂದು ಪಂಜಾಬ್ ಕಿಂಗ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries