ಬದಿಯಡ್ಕ: ಬದಿಯಡ್ಕ (ನೀರ್ಚಾಲು) ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕಾಲಾವಧಿ ನೇಮೋತ್ಸವ ಮೇ.4 ಸೋಮವಾರದಿಂದ ಮೇ.6 ಬುಧವಾರದ ತನಕ ಜರಗಲಿರುವುದು. ಮೇ.3 ರಂದು ಸಂಜೆ 7.30ಕ್ಕೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಪಿಲಿಭೂತದ ಭಂಡಾರ ಹೊರಡುವುದು. ರಾತ್ರಿ 8 ಗಂಟೆಗೆ ಪೆರಡಾಲ ಗುತ್ತಿನಿಂದ ಕಿರುವಾಳು ಸಮೇತ ಪೆಲಡ್ಕತ್ತಾಯ ದೈವದ ಭಂಡಾರ ಹೊರಟು ಸ್ಥಾನಕ್ಕೆ ಆಗಮಿಸಲಿದೆ. ರಾತ್ರಿ 9ಕ್ಕೆ ಬೀರತ್ತಂಬಿಲ, ಅರಸಿನಹುಡಿ, ಅನ್ನದಾನ. ಮೇ.5 ರಂದು ಮಂಗಳವಾರ ಬೆಳಗ್ಗೆ 10ಕ್ಕೆ ಶ್ರೀ ಕಿನ್ನಿಮಾಣಿ ದೈವದ ನೇಮ ಆರಂಭ, 12ಕ್ಕೆ ಪ್ರಸಾದ ವಿತರಣೆ, 1 ರಿಂದ ಅನ್ನದಾನ, ಅಪರಾಹ್ನ 3.30ಕ್ಕೆ ಶ್ರೀ ಪೂಮಾಣೀ ದೈವದ ನೇಮ ಆರಂಭ, 4.30 ರಿಂದ ಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಬೀರತ್ತಂಬಿಲ, ಅರಸಿನಹುಡಿ. ಮೇ.6 ಬುಧವಾರ ಬೆಳಿಗ್ಗೆ 10.30ಕ್ಕೆ ಪಿಲಿಭೂತ ದೈವಗಳ ನೇಮ ಆರಂಭ, ಮಧ್ಯಾಹ್ನ 12ಕ್ಕೆ ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ 2ಕ್ಕೆ ಪೆಲಡ್ಕತ್ತಾಯ ದೈವಗಳ ನೇಮ ಆರಂಭ, 3 ರಿಂದ ಪ್ರಸಾದ ವಿತರಣೆ, ಸಂಜೆ 4ಕ್ಕೆ ಅವಭೃತದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.

