ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ 42ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆ ಮೇ 31(ಇಂದು) ಜಿಲ್ಲಾ ಕುಲಾಲ ಸಮುದಾಯದ ಭವನ ತುಮಿನಾಡು, ಕುಂಜತ್ತೂರು ನಲ್ಲಿ ಜರಗಲಿದೆ. ಬೆಳಗ್ಗೆ 7.30 ರಿಂದ ಗಣಹೋಮ, ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಬೆಳಗ್ಗೆ 10.45 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಗಣ್ಯರು ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಜಿಲ್ಲಾ ಕುಲಾಲ ಸಾಧಕ ಪ್ರಶಸ್ತಿ, ಜನಪ್ರತಿನಿಧಿಗಳಿಗೆ ಗೌರವಾರ್ಪಣೆ, ಸಹಭೋಜನ ನಡೆಯಲಿದೆ. ಮದ್ಯಾಹ್ನ 2 ರಿಂದ 42ನೇ ವಾರ್ಷಿಕ ಮಹಾಸಭೆ ಜರಗಲಿದೆ. ನಂತರ ಕುಲಾಲೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.


