ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದ, ಮೆಕ್ಸಿಕೋ ಗಡಿಭಾಗದ ಸನಿಹದಲ್ಲಿರುವ ಲಾರೆಡೊ ನಗರದಲ್ಲಿ ಸರಕು ಸಾಗಣೆ ರೈಲಿನ ಬೋಗಿಯಲ್ಲಿ ರವಿವಾರ 6 ಮಂದಿಯ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಮೆರಿಕ-ಮೆಕ್ಸಿಕೋ ಗಡಿಯಾದ್ಯಂತ ಕಾರ್ಯನಿರ್ವಹಿಸುವ ಯೂನಿಯನ್ ಪೆಸಿಫಿಕ್ ರೈಲ್ವೇಗೆ ಸೇರಿದ ಗೂಡ್ಸ್ ರೈಲಿನಲ್ಲಿ ಮೃತದೇಹ ಪತ್ತೆಯಾಗಿದ್ದು ಮೃತರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

