HEALTH TIPS

ಮಹಾರಾಷ್ಟ್ರದ ಅಂಬೇನಾಳಿ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದ ಕಾರು: 8 ಯುವಕರ ಸಾವು!

 ರಾಯಗಢ,: ಎಸ್‌ಯುವಿ ಕಾರೊಂದು ಸುಮಾರು 1 ಸಾವಿರ ಅಡಿ ಆಳದ ಕಣಿವೆಗೆ ಬಿದ್ದು 8 ಯುವಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಮೃತರು ಮಹಾರಾಷ್ಟ್ರದ ಸತಾರ ಹಾಗೂ ರತ್ನಗಿರಿ ನಗರದವರು ಎಂದು ತಿಳಿದು ಬಂದಿದೆ. 


ಪೋಳಾದಪುರ್-ಮಹಾಬಲೇಶ್ವರ ರಸ್ತೆಯ ಅಂಬೇನಾಳಿ ಘಾಟ್ ಬಳಿ ಈ ದುರಂತ ಭಾನುವಾರ ಬೆಳಗಿನ ಜಾವ ಸಂಭವಿಸಿದೆ ಎಂದು ರಾಯಗಢ ಎಸ್‌ಪಿ ತಿಳಿಸಿದ್ದಾರೆ.

ಅಂಬೇನಾಳಿ ಘಾಟ್ ಬಳಿ ಕಡಿದಾದ ರಸ್ತೆಯ ತಿರುವಿನಲ್ಲಿ ಕಾರು ಹೋಗುತ್ತಿರುವಾಗ ಆಳವಾದ ಕಣಿವೆಗೆ ನಿಯಂತ್ರಣ ತಪ್ಪಿ ಬಿದ್ದಿದೆ. ಆ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಸಿಗದಿದ್ದರಿಂದ ತುರ್ತು ಸಹಾಯ ಸಾಧ್ಯವಾಗಿರಲಿಲ್ಲ. ಇದರಿಂದ ಮೃತರ ಕುಟುಂಬದವರು ಆತಂಕಗೊಂಡು ತಮ್ಮವರು ಸಂಪರ್ಕಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ತಿಳಿದು ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ಭೀಕರ ಅಪಘಾತ ಸಂಭವಿಸಿರುವುದು ಕಂಡು ಬಂದಿದೆ.

ಮೃತರನ್ನು ಸತಾರಾ ನಿವಾಸಿಗಳಾದ ರಿತೇಶ್ ಲೋಖಂಡೆ (22), ಸುಹಾಸ್ ಲೋಖಂಡೆ (20), ಉತ್ಕರ್ಷ್ ಶಿಂಗ್ಟೆ (21), ನಿಖಿಲ್ ಶಿಂಗ್ಟೆ (25), ಮಹೇಶ್ ಪವಾರ್ (25), ಆದಿತ್ಯ ಸಾಳುಂಖೆ (21), ರಾಜೇಶ್ ಕಾಟ್ಕರ್ (35), ಮತ್ತು ರತ್ನಗಿರಿಯ ಅಂಶ್ ಚವಾಣ್ (19) ಎಂದು ಗುರುತಿಸಲಾಗಿದೆ.

ಯುವಕರು ಮೋಜಿಗಾಗಿ ರತ್ನಾಗಿರಿಯ ಕಡಲತೀರ ದಾಪೋಲಿಗೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ದಾಪೋಲಿಯಿಂದ ಸತಾರಕ್ಕೆ ಬರುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಣಿವೆಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹಾಗೂ ಕಾರನ್ನು ಪೊಲೀಸರು ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಭಾರಿ ಹರಸಾಹಸಪಟ್ಟು ಮೇಲೆ ತಂದಿದ್ದಾರೆ. ಈ ಕುರಿತ ಅಂಬೇನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಘಟನೆ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು ಇದು ಅತ್ಯಂತ ನೋವಿನ ಸಂಗತಿ, ಮೃತ ಯುವಕರ ಕುಟುಂಬದವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries