ಡೀಪ್ ಫೇಕ್‌ಗಳು, ಸೈಬರ್ ಸಮರಕೌಶಲ್ಯ ಹಾಗೂ ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆಗಳು ರಕ್ಷಣಾ ವಲಯಕ್ಕೆ ಹೊಸ ಸವಾಲುಗಳನ್ನು ಒಡ್ಡಲಿದೆಯೆಂದು ಅವರು ಹೇಳಿದ್ದಾರೆ.
ಹೊಸದಿಲ್ಲಿ ಎಎನ್‌ಐ ಸುದ್ದಿಸಂಸ್ಥೆಯ ರಾಷ್ಟ್ರೀಯ ಭದ್ರತಾ ಶೃಂಗಸಭೆ 2.0 ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ನಾವು ರಕ್ಷಣಾ ಪ್ರತಿರೋಧದ ಬಗ್ಗೆ ಮಾತನಾಡುವಾಗ ಕೃತಕ ಬುದ್ಧಿಮತ್ತೆಯ ಬಗ್ಗೆ ಸುಂದರವಾದ ಚಿತ್ರಣವನ್ನು ಕಲ್ಪಿಸಲು ಸಾಧ್ಯವಿಲ್ಲವೆಂದು ಹೇಳಿದರು.
ಪ್ರತಿಯೊಂದು ತಂತ್ರಜ್ಞಾನವೂ ಎರಡು ರೂಪಗಳನ್ನು ಒಳಗೊಂಡಿರುತ್ತದೆ. ಕೃತಕ ಬುದ್ಧಿಮತ್ತೆಯ ವಿಚಾರದಲ್ಲಿ ಇಂತಹ ಕಳವಳ ಮುಂಬರುವ ದಿನಗಳಲ್ಲಿ ಇನ್ನಷ್ಟು ಉಲ್ಬಣಿಸಲಿದೆ ಎಂದರು.
ಸಾಫ್ಟ್‌ವೇರ್‌ನ ದುಬರ್ ಲತೆಗಳನ್ನು ಶೋಧಿಸುವುದು ಮತ್ತು ಸರಿಪಡಿಸುವುದು ಎಐನ ಸಾಮಾನ್ಯ ಉದ್ದೇಶವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಗಳನ್ನು, ಆಸ್ಪತ್ರೆಗಳನ್ನು ಹಾಗೂ ವಿದ್ಯುತ್‌ಗ್ರಿಡ್ ಅನ್ನು ಬಲಪಡಿಸುವ ಎಐ ಮಾದರಿಯು ದುಷ್ಟ ಕೈಗಳಿಗೆ ಸಿಲುಕಿದಲ್ಲಿ ಅವೆಲ್ಲವನ್ನೂ ನಾಶಪಡಿಸಬಲ್ಲದು ಎಂದರು. ಹೀಗಾಗಿ ಎಐ ಅನ್ನು ಪೌರಾಣಿಕ ಕಥೆಗಳಲ್ಲಿ ಬರುವ ಭಸ್ಮಾಸುರನಿಗೆ ಹೋಲಿಸಬಯಸುವುದಾಗಿ ಅವರು ಹೇಳಿದರು. ಶಿವ ಭಸ್ಮಾಸುರನಿಗೆ ಕೊಡುತ್ತಾನೆ. ಕೊನೆಗೆ ಆ ವರವೇ ಶಿವನಿಗೆ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದವರು ಹೇಳಿದರು.
ಆದಾಗ್ಯೂ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಎಐನ ಬಳಕೆಯು ಬಹ್ಮೋಸ್ ಕ್ಷಿಪಣಿ ವ್ಯವಸ್ಥೆಗಳ ಕ್ಷಮತೆಯನ್ನು ನಿಖರಗೊಳಿಸಿತೆಂದು ಹೇಳಿದರು.
ಎಐ ಆಧಾರಿತ ಸುದರ್ಶನ ವಾಯುರಕ್ಷಣಾ ವ್ಯವಸ್ಥೆ
ಸುದರ್ಶನ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯು, ರಕ್ಷಣಾ ವಲಯದಲ್ಲಿ ಎಐನ ಅತ್ಯುತ್ತಮ ಬಳಕೆಗೆ ಉತ್ತಮ ಉದಾಹರಣೆಯೆಂದವರು ಹೇಳಿದರು. ತಲೆಯೆತ್ತುತ್ತಿರುವ ಎಐ ಆಧಾರಿತ ಸವಾಲುಗಳಿಗೆ ಪ್ರತಿಕ್ರಿಯಿಸಲು ಸಶಸ್ತ್ರಪಡೆಗಳು ಮಾರ್ಗನಕ್ಷೆಯೊಂದನ್ನು ರೂಪಿಸುತ್ತಿವೆಯೆಂದು ರಾಜನಾಥ್ ಸಿಂಗ್ ಹೇಳಿದರು.

