ಈ ಎರಡು ವಿಮಾನಯಾನ ಸಂಸ್ಥೆಗಳು ಭಾರತೀಯ ವಿಮಾನಯಾನ ಮಾರುಕಟ್ಟೆಯಲ್ಲಿ 90 ಶೇಕಡ ಪಾಲು ಹೊಂದಿವೆ.
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ಬಳಿಕ ವಿಮಾನಯಾನ ಉದ್ಯಮವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದೂ ಅಲ್ಲದೆ, ಶಾಲೆಗಳಿಗೆ ರಜೆ ಆರಂಭವಾದ ಹಿನ್ನೆಲೆಯಲ್ಲಿ ವಿಮಾನಯಾನದ ಬೇಡಿಕೆಯೂ ಕುಸಿದಿದೆ. ಹಾಗಾಗಿ ಯಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಈ ಎರಡು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ.
ಏರ್ ಇಂಡಿಯಾ ತನ್ನ ದೇಶಿ ಹಾರಾಟಗಳ 15 ಶೇಕಡದಷ್ಟು ಮತ್ತು ಇಂಡಿಗೊ 5ರಿಂದ 7 ಶೇಕಡದಷ್ಟು ಹಾರಾಟಗಳನ್ನು ಕಡಿತಗೊಳಿಸಲಿವೆ ಎಂದು ವರದಿಗಳು ತಿಳಿಸಿವೆ.

