HEALTH TIPS

Assam Result: ಮತ ಪ್ರಮಾಣ ಶೇ 4.6ರಷ್ಟು ಏರಿಕೆ, 22 ಅಧಿಕ ಸ್ಥಾನ ಬಾಚಿದ ಬಿಜೆಪಿ

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ. 

ಚುನಾವಣಾ ಆಯೋಗದ ಮತ ಹಂಚಿಕೆ ದತ್ತಾಂಶದ ಪ್ರಕಾರ, 2021ಕ್ಕೆ ಹೋಲಿಸಿದರೆ ಬಿಜೆಪಿ ಮತ ಪ್ರಮಾಣದಲ್ಲಿ ಶೇ 4.6ರಷ್ಟು ಹೆಚ್ಚಳ ಕಂಡುಬಂದಿದೆ.

ಅಂದರೆ ಬರೋಬ್ಬರಿ 22 ಸ್ಥಾನಗಳನ್ನು ಅಧಿಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

2021ರಲ್ಲಿ 60 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ ತನ್ನ ಬಲವನ್ನು 82 ಸ್ಥಾನಗಳಿಗೆ ವೃದ್ಧಿಸಿಕೊಂಡಿತು.

ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣ ಶೇ 37.81 ಆಗಿದೆ. 2021ರಲ್ಲಿ ಮತ ಪ್ರಮಾಣ 33.21ರಷ್ಟಿತ್ತು.

ಮತ್ತೊಂದೆಡೆ ಕಾಂಗ್ರೆಸ್ ತನ್ನ ಮತ ಪ್ರಮಾಣದಲ್ಲಿ ಶೇ 0.17ರಷ್ಟು ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ 10 ಸ್ಥಾನ ಕಳೆದುಕೊಂಡಿತು.

2021ರಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಮತ ಪ್ರಮಾಣ 29.67ರಷ್ಟಿತ್ತು. ಈಗ ಅದು 29.84ಕ್ಕೆ ಏರಿಕೆಯಾಯಿತು. ಆದರೆ ಶಾಸಕರ ಸಂಖ್ಯೆ 29ರಿಂದ 19ಕ್ಕೆ ಕುಸಿದಿದೆ.

ಬಿಜೆಪಿಯ ಮೈತ್ರಿ ಪಕ್ಷ ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ ಪ್ರಮಾಣ 2021ರಲ್ಲಿ 7.91ರಷ್ಟಿತ್ತು. ಈಗ ಅದು ಶೇ 6.47ಕ್ಕೆ ಕುಸಿದಿದೆ. ಆದರೂ ಒಂದು ಸ್ಥಾನ ಹೆಚ್ಚು ಗೆದ್ದು ಶಾಸಕರ ಸಂಖ್ಯೆಯನ್ನು 10ಕ್ಕೆ ಏರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries