HEALTH TIPS

ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಥವಾ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾವ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನ ಮಾನ ನೀಡುವ ಅಥವಾ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾವ ಕೇಂದ್ರ ಸರಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.

ಇಂತಹ ಕ್ರಮಗಳಿಗಾಗಿ ವಿವಿಧ ಸಂಘಟನೆಗಳಿಂದ ನಿರಂತರ ಬೇಡಿಕೆ ಕೇಳಿ ಬರುತ್ತಿರುವ ನಡುವೆ ಮೇಘವಾಲ್ ಅವರು ಈ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮೇಘವಾಲ್ ಅವರು, ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನ ಮಾನ ನೀಡಬೇಕು ಮತ್ತು ದೇಶಾದ್ಯಂತ ಗೋಹತ್ಯೆ ನಿಷೇಧಿಸಬೇಕು ಎಂದು ಕೋರುವ ಮನವಿಗಳನ್ನು ಸಂಸದರಿಗೆ ಹಾಗೂ ಸರಕಾರಕ್ಕೆ ನಿಯಮಿತವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಪ್ರಸ್ತುತ ಇಂತಹ ಯಾವುದೇ ವಿಷಯ ಸಂಪುಟದ ಪರಿಶೀಲನೆಯಲ್ಲಿ ಇಲ್ಲ. ಒಂದು ವೇಳೆ ಸರಕಾರದ ಅಥವಾ ಸಚಿವ ಸಂಪುಟದ ಹಸ್ತಕ್ಷೇಪದ ಅಗತ್ಯವಿರುವ ಹಂತಕ್ಕೆ ಪ್ರಸ್ತಾವ ತಲುಪಿದರೆ, ನಾವು ನಿಮಗೆ ಮಾಹಿತಿ ನೀಡುತ್ತೇವೆ ಎಂದು ಮೇಘವಾಲ್ ತಿಳಿಸಿದ್ದಾರೆ.

ರಾಜ್ಯದ 1950ರ ಕಾಯ್ದೆಯಡಿ ಜಾನುವಾರು ಹತ್ಯೆ ನಿಯಮಗಳ ಜಾರಿಯನ್ನು ತೀವ್ರಗೊಳಿಸಲು ಇತ್ತೀಚೆಗಿನ ಬಿಜೆಪಿ ನೇತೃತ್ವದ ಪಶ್ಚಿಮಬಂಗಾಳ ಸರಕಾರ ಕೈಗೊಂಡ ಕ್ರಮವನ್ನು ಉಲ್ಲೇಖಿಸಿದ ಅವರು, ವಿವಿದ ರಾಜ್ಯಗಳು ತಮ್ಮದೇ ಆದ ಪರಿಸ್ಥಿತಿ ಆಧಾರದ ಮೇಲೆ ಇಂತಹ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries