ಪುಣೆ: 'ನೀಟ್-ಯುಜಿ' ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಆರೋಪಿ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರ ಒಡೆತನದ ರೇಣುಕೈ ಕರಿಯರ್ ಸೆಂಟರ್ ಇರುವ ಆವರಣಕ್ಕೆ ಮುಂಬೈ ಮಹಾನಗರ ಪಾಲಿಕೆಯು ಬುಧವಾರ ಬೀಗ ಹಾಕಿದೆ.
ಕಟ್ಟಡಕ್ಕೆ ಸ್ವಾಧೀನ ದೃಢೀಕರಣ ಪತ್ರ ನೀಡುವ ಮುನ್ನವೇ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಆರೋಪದಲ್ಲಿ ಈ ಕ್ರಮವನ್ನು ತೆಗದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಟ್ ಪರೀಕ್ಷೆ ನಡೆಯುವ 10 ದಿನ ಮುಂಚೆಯೇ ರಸಾಯನ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಶಿವರಾಜ್ ಅವರಿಗೆ ತಲುಪಿತ್ತು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಭಾನುವಾರ ಶಿವರಾಜ್ ಅವರನ್ನು ಬಂಧಿಸಿದ್ದರು.

