ಕಾಸರಗೋಡು: ಚೆರ್ವತ್ತೂರು-ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ತನಿಖಾ ವರದಿ ಸಲ್ಲಿಸಲು ಕಾಸರಗೋಡು ಜಿಲ್ಲಾಧಿಕಾರಿ ನೇಮಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಕಾಞಂಗಾಡು ಆರ್‍ಡಿಒ ಪ್ರತಿನಿಧಿ ಹಿರಿಯ ಅಧೀಕ್ಷಕ ಇ.ಎಂ.ಬಿಜು, ಹೊಸದುರ್ಗ ತಹಶೀಲ್ದಾರ್ ಪಿ.ಕೆ. ಪ್ರೇಮಾನಂದ್, ಉಪ ತಹಶೀಲ್ದಾರ್ ಪಿ.ವಿ. ತುಳಸಿರಾಜ್, ಮಣ್ಣು ಸಂರಕ್ಷಣಾ ಮೇಲ್ವಿಚಾರಕ ಕೆ.ನಜಿಬುದ್ದೀನ್, ರಮ್ಲಾ.ಎನ್, ಗಣಿ ಮತ್ತು ಭೂವಿಜ್ಞಾನ ಸಹಾಯಕ ಭೂವಿಜ್ಞಾನಿ ಅಜಿತ್.ಎಲ್, ಅಮೃತಾ.ಕೆ, ಚಂದೇರ ಪೋಲೀಸ್ ಇನ್ಸ್‍ಪೆಕ್ಟರ್ ಶಿಜು ಎಂ.ವಿ, ಎಂವಿಐ ವಿಜಯನ್.ಎಂ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುನೀಲ್ ಕುಮಾರ್ ಎಸ್.ಶಾಜಿ ತೈಲ್, ಪಿಲಿಕೋಡ್ ಪಂಚಾಯಿತಿ ಕಾರ್ಯದರ್ಶಿ ಮಧುಸೂದನ, ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಕುಂಞÂ್ಞ ರಾಮನ್ ಸಮಸ್ಯೆಗಳನ್ನು ಮಂಡಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಹರಿದಾಸ್ ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಗುತ್ತಿಗೆ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.



